ಆರ್ಸಿಬಿ ಯಾಕೆ ಇನ್ನೂ ಕಪ್ ಗೆದ್ದಿಲ್ಲ ಅನ್ನೋ ಪ್ರಶ್ನೆ, ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಕಪ್ ಎತ್ತುವ ಸನಿಹಕ್ಕೆ ಹೋಗಿ ಅದೆಷ್ಟೋ ಬಾರಿ ಎಡವಿದ್ದೂ ಉಂಟು. ಯಾಕೋ ಲಕ್ ಸರಿ ಇಲ್ಲ, ‘ಮುಂದಿನ ಸಲ ಕಪ್ ನಮ್ದೇ’ ಅನ್ಕೊಂಡು ಸುಮ್ಮನಿದ್ದ ಅಭಿಮಾನಿಗಳ ಸಂಖ್ಯೆ ಕೋಟಿ, ಕೋಟಿ.
ಇನ್ನೂ ಕೆಲವರು ಆರ್ಸಿಬಿ ಎಂಬ ಹೆಸರಲ್ಲೇ ನಮಗೆ ಲಕ್ ಇಲ್ಲ. ಅದನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಇತ್ತು. ಇದೀಗ ಆರ್ಸಿಬಿ ಅಭಿಮಾನಿಗಳ ಮದಹಾಸೆಯನ್ನು ಫ್ರಾಂಚೈಸಿ ಈಡೇರಿಸ್ತಿದೆ. ಬೆಳ್ಳಂಬೆಳಗ್ಗೆ ಆರ್ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಪ್ರೊಮೋ ಒಂದನ್ನು ಹರಿಬಿಟ್ಟಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ಅಚ್ಚರಿಗೂ ಒಳಗಾಗಿದ್ದಾರೆ.
ಪ್ರೋಮೋದಲ್ಲಿ ಏನಿದೆ..?
ಕಾಂತಾರ ವೇಷದ ಶಿವನಾಗಿ ಕಾಣಿಸಿಕೊಂಡಿರುವ ರಿಷಬ್ ಶೆಟ್ಟಿ, ಬಾರು ಕೋಲು ಹಿಡಿದು ಕೆಂಪು ಬಣ್ಣದ ಶಾಲನ್ನು ಹೆಗಲ ಮೇಲೆ ಹಾಕಿ ಬ್ಯಾಣಕ್ಕೆ (ಹಕ್ಕಲು) ಎಂಟ್ರಿ ಕೊಡ್ತಾರೆ. ಅಲ್ಲಿ ಮೂರು ಕೂಣಗಳನ್ನು ಸಾಲಾಗಿ ನಿಲ್ಲಿಸಲಾಗಿದೆ. ಅವುಗಳ ಮೇಲೆ ಕ್ರಮವಾಗಿ ರಾಯಲ್ (ROYAL), ಚಾಲೆಂಜರ್ಸ್ (CHALLENGERS), ಬ್ಯಾಂಗಳೂರು (BANGALORE) ಎಂದು ಕೆಂಪು ವಸ್ತ್ರದ ಮೇಲೆ ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ಅದನ್ನು ಕೋಣಗಳಿಗೆ ಹೊದಿಸಲಾಗಿದೆ. ‘ರಾಯಲ್’, ‘ಚಾಲೇಂಜರ್ಸ್’ ಎಂದು ಬರೆದಿದ್ದ ಕೋಣಗಳ ಬೆನ್ನು ತಟ್ಟಿ ಪಾಸ್ ಮಾಡಿದ ರಿಷಬ್ ಶೆಟ್ಟಿ, BANGALORE ಎಂಬ ಕೋಣದ ಬೆನ್ನ ಮೇಲೆ ಕೈಯಿಟ್ಟು ‘ಇದು ಬೇಡ. ಭಟ್ಟರೆ, ಇದು ಬೇಡ! ತೆಗೆದುಕೊಂಡು ಹೋಗಿ’ ಎನ್ನುತ್ತಿರುವ ವಿಡಿಯೋ ಇದಾಗಿದೆ. ನಂತರ ಒಂದು ನೋಟ ಬೀರುವ ರಿಷಬ್ ಶೆಟ್ಟಿ ‘ಅರ್ಥ ಆಯ್ತಾ..’ ಎಂದು ಪ್ರಶ್ನೆ ಮಾಡ್ತಾರೆ. ಈ ವಿಡಿಯೋ ಪೋಸ್ಟ್ ಮಾಡಿರುವ ಆರ್ಸಿಬಿ ‘ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?’ ಎಂದು ಪ್ರಶ್ನೆ ಮಾಡಿದೆ.
ರಿಷಬ್ ಶೆಟ್ಟಿ ಹೇಳಿದ್ದೇನು..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಬ ಹೆಸರಿನಲ್ಲೇ ದೋಷ ಇದೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಈ ದೋಷವನ್ನು ನಿವಾರಿಸಿ ‘ಈ ಸಲ ಕಪ್’ ಎತ್ತಲು ಮುಂದಾಗಿರುವ ಫ್ರಾಂಚೈಸಿ ತನ್ನ ಹೆಸರನ್ನು ಬದಲಾವಣೆ ಮಾಡಲಿದೆ. Royal Challengers Bangalore ಇದ್ದ ಹೆಸರು Royal Challengers Bengaluru ಎಂದಾಗಲಿದೆ. ಕನ್ನಡದಲ್ಲಿ ‘ಬೆಂಗಳೂರು’ ಎಂದು ಹೇಳುವಂತೆ, ಇಂಗ್ಲಿಷ್ನಲ್ಲೂ ಬೆಂಗಳೂರು ಎಂದು ಹೇಳಲಾಗುತ್ತದೆ ಮತ್ತು ಬರೆಯಲಾಗುತ್ತದೆ. ಅಂದರೆ BANGALORE ಬದಲಾಗಿ ‘BENGALURU’ ಎಂದು ಹೆಸರು ಬದಲಾಗಲಿದೆ. ಇದನ್ನು ಮಾರ್ಚ್ 19 ರಂದು ಅನ್ಬಾಕ್ಸ್ ಈವೆಂಟ್ನಲ್ಲಿ ಅಧಿಕೃತ ಆಗಲಿದೆ.
ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?
— Royal Challengers Bangalore (@RCBTweets) March 13, 2024
Understood what Rishabh Shetty is trying to say?
You’ll find out at RCB Unbox. Buy your tickets now. 🎟️@shetty_rishab #RCBUnbox #PlayBold #ArthaAytha #ನಮ್ಮRCB pic.twitter.com/sSrbf5HFmd


























