ಪುತ್ತೂರು : ಯಾವುದೋ ರೀತಿಯಲ್ಲಿ ವಂಚನೆ ನಡೆಸಿ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ಹಣ ವರ್ಗಾವಣೆ ಮಾಡಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕು ಚಿಕ್ಕಮುಡ್ನೂರು ನಿವಾಸಿ ಮಹಿಳೆ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಮಹಿಳೆಯು ಪುತ್ತೂರಿನ ದರ್ಬೆ ಎಂಬಲ್ಲಿರುವ ಯೂನಿಯನ್ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದು, ಸದ್ರಿ ಖಾತೆಯಿಂದ ಫೆ.2 ರಾತ್ರಿ ಸಮಯ ರೂ 13,000/- ಹಣ ಕಡಿತಗೊಂಡಿರುವ ಬಗ್ಗೆ ಮೊಬೈಲ್ ಗೆ ಸಂದೇಶ ಬಂದಿರುತ್ತದೆ. ಖಾತೆಯಿಂದ ಯಾರೋ ಅಪರಿಚಿತ ವ್ಯಕ್ತಿಯು ಯಾವುದೋ ರೀತಿ ವಂಚಿಸಿ ಹಣವನ್ನು ಪಡೆದುಕೊಂಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ ನಂ: 21/2024 ಕಲಂ:420 ಐ ಪಿ ಸಿ ಮತ್ತು 66(ಸಿ), 66(ಡಿ ) ಐ ಟಿ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























