ಮಂಗಳೂರು : ದಕ್ಷಿಣ ಕನ್ನಡದಲ್ಲಿ ಬ್ರಿಜೇಶ್ ಚೌಟರನ್ನು ನಾವು ಈ ಬಾರಿ ಗೆಲ್ಲಿಸೋಣ. ಅವರನ್ನು ಗೆಲ್ಲಿಸುವುದಕ್ಕಾಗಿ ನಾನು ದುಡಿಯುತ್ತೇನೆ ಎಂದು ಹೇಳಿದರು.

ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಘೋಷಣೆಯಾಗುತ್ತಲೇ ಅವರನ್ನು ಭೇಟಿಯಾದ ಕಟೀಲ್ ಸಿಹಿ ತಿನ್ನಿಸುವುದರ ಮೂಲಕ ಅಭಿನಂದಿಸಿದರು.

ಮುಂದಿನ ಲೋಕಸಭಾ ಚುನಾವಣಾ ದೃಷ್ಟಿಯಿಂದ ದ.ಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಕ್ಯಾ. ಬೃಜೇಶ್ ಚೌಟರನ್ನು ಘೋಷಿಸಿದೆ. ಕ್ಯಾ. ಬೃಜೇಶ್ ಚೌಟ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಕಾರ್ಯವನ್ನು ಸ್ವಾಗತಿಸುತ್ತೇನೆ.

ಬ್ರಿಜೇಶ್ ಚೌಟ ಅವರನ್ನು ಗೆಲ್ಲಿಸುವುದೊಂದೇ ನಮ್ಮ ಗುರಿ ಎಂದರು.


























