ಬಹುಸಂಖ್ಯಾ ಭಾರತೀಯರು ಬಳಸುತ್ತಿದ್ದ ಪೇಟಿಯಂ ಪೇಮೆಂಟ್ ಬ್ಯಾಂಕ್ ಲಿಮಿಡೆಟ್ ಇಂದಿನಿಂದ ಪ್ರಮುಖ ಸೇವೆಯನ್ನು ನಿಲ್ಲಿಸುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಾನುಸಾರ ನಿಯಮ ಉಲ್ಲಂಘಿಸಿದ್ದ ಕಾರಣ ಡಿಜಿಟಲ್ ಪೇಮೆಂಟ್ ಆ್ಯಪ್ ತನ್ನ ಸೇವೆಯನ್ನು ಕೊನೆಗೊಳಿಸುತ್ತಾ ಬರುತ್ತಿದೆ. ಅಂದಹಾಗೆಯೇ ಸದ್ಯ ಪೇಟಿಯಂನಲ್ಲಿ ಕೆಲವೊಂದು ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಗಮನಿಸಬೇಕಿದೆ.
ಪೇಟಿಯಂ ಬಳಕೆದಾರರ ಗಮನಕ್ಕೆ
- ಪೇಟಿಯಂ ಪೇಮೆಂಟ್ ಗ್ರಾಹಕರು ಇನ್ಮುಂದೆ ತಮ್ಮ ಖಾತೆಗಳಿಗೆ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಹಣ ಹಿಂಪಡೆಯಬಹುದು ಮತ್ತು ವರ್ಗಾಯಿಸಬಹುದು.
- ಪೇಟಿಯಂ ಮೂಲಕ ನೇರ ಲಾಭ ವರ್ಗಾವಣೆ, ಸಬ್ಸಿಡಿ ಪಡೆಯಲು ಸಾಧ್ಯವಾಗುವುದಿಲ್ಲ. ಆದರೆ ಪಾಲುದಾರ ಬ್ಯಾಂಕ್ಗಳಿಂದ ಮರುಪಾವತಿ, ಕ್ಯಾಶ್ಬ್ಯಾಕ್ ಪಡೆಯಬಹುದು.
- ಪೇಟಿಯಂ ವ್ಯಾಲೆಟ್ನಿಂದ ಹಣ ವರ್ಗಾಯಿಸಲು ಸಾಧ್ಯವಾಗದು. ಆದರೆ ಬಿಲ್ ಪಾಪತಿಸಲು ವ್ಯಾಲೆಟ್ನಲ್ಲಿದ್ದ ಹಣವನ್ನು ಬಳಸಬಹುದು.
- ಪೇಟಿಯಂ ಬ್ಯಾಂಕ್ ನೀಡಿದ ಫಾಸ್ಟ್ಟ್ಯಾಗ್ ರೀಚಾರ್ಜ್ ಮಾಡಲು ಆಗುವುದಿಲ್ಲ.
- NCMC ಕಾರ್ಡ್ (ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್) ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ.
- ಯುಪಿಐ ಅಥವಾ ಐಎಮ್ಪಿಎಸ್ ಮೂಲಕ ಹಣ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.
- ಚಂದಾದಾರಿಕೆಗಳಿಗೆ ಪಾವತಿಸಲು ಪೇಟಿಯಂ ಬ್ಯಾಲೆನ್ಸ್ ಅನ್ನು ಬಳಸಬಹುದಾಗಿದೆ. ಆದರೆ ಮಾರ್ಚ್ 15ರಿಂದ ಬೇರೆ ಬ್ಯಾಂಕ್ ಖಾತೆ ಬಳಸಬೇಕಾಗುತ್ತದೆ.


























