ಗುರುಗ್ರಾಮ್ : ಎಗ್ ಕರಿ ಮಾಡಿ ಕೊಡಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಲಿವ್ ಇನ್ ಪಾಟ್ನರ್ ಆಗಿದ್ದ ಮಹಿಳೆಯನ್ನ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಹರಿಯಾಣದಲ್ಲಿ ನಡೆದಿದೆ.
ಚೌಮಾ ಗ್ರಾಮದ ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. 32 ವರ್ಷದ ಅಂಜಲಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ.
35 ವರ್ಷದ ಲಲ್ಲನ್ ಯಾದವ್ ಎಂಬಾತ ಅಂಜಲಿ ಜೊತೆ ಲಿವ್ ಇನ್ ರಿಲೇಷನ್‌ಶಿಪ್ ಹೊಂದಿದ್ದ. ಇಬ್ಬರು ಒಟ್ಟಿಗೆ ಇರುವಾಗ ಎಗ್ ಕರಿ ಮಾಡಿಕೊಡಲು ಕೇಳಿದ್ದಾನೆ. ಅಂಜಲಿ ಎಗ್ ಕರಿ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆ ಪ್ರಕರಣ ದಾಖಲಿಸಿಕೊಂಡ ಗುರುಗ್ರಾಮ್ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
ಪೊಲೀಸರ ವಿಚಾರಣೆಯಲ್ಲಿ ಲಲ್ಲನ್ ಯಾದವ್ ಕೊಲೆಗೆ ಕಾರಣ ಏನು ಅನ್ನೋದನ್ನ ಬಾಯ್ಬಿಟ್ಟಿದ್ದಾನೆ. ನಾನು ಎಗ್ ಕರಿ ಮಾಡಲು ಹೇಳಿದಾಗ ನಿರಾಕರಿಸಿದ್ದಕ್ಕೆ ತಾಳ್ಮೆ ಕಳೆದುಕೊಂಡೆ. ಆಗ ನಾನು ಮದ್ಯಪಾನ ಮಾಡಿದ್ದು, ಕುಡಿತ ಮತ್ತಿನಲ್ಲಿ ಬೆಲ್ಟ್ ಮತ್ತು ಸುತ್ತಿಗೆಯಲ್ಲಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ನಿರ್ಮಾಣ ಹಂತದ ಕಟ್ಟಡಕ್ಕೆ ಅಂಜಲಿಯನ್ನು ಕರೆದುಕೊಂಡು ಬಂದಿದ್ದ ಆರೋಪಿಯು ತನ್ನ ಹೆಂಡತಿ ಎಂದು ಪರಿಚಯಿಸಿದ್ದ. ಇಬ್ಬರೂ ಒಟ್ಟಿಗೆ ಇದ್ದಿದ್ದರಿಂದ ಯಾರಿಗೂ ಅನುಮಾನ ಬಂದಿರಲಿಲ್ಲ. ಕೊನೆಗೆ ಲಲ್ಲಾನ್ ಯಾದವ್ 6 ವರ್ಷದ ಹಿಂದೆ ತನ್ನ ಹೆಂಡತಿ ಹಾವು ಕಚ್ಚಿ ಸತ್ತು ಹೋಗಿದ್ದಳು. 7 ತಿಂಗಳ ಹಿಂದೆ ಅಂಜಲಿ ಎಂಬಾಕೆ ಜೊತೆ ಸಂಬಂಧ ಇರೋ ವಿಚಾರ ಬಾಯ್ಬಿಟ್ಟಿದ್ದಾನೆ.


























