ಪುತ್ತೂರು : ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟ ಸದಸ್ಯರಾದ ಜಯಾನಂದ ಬಂಗೇರ ರವರ ಮನೆ ಅಂಗಳಕ್ಕೆ ಶಾಸಕರ ಬೆಂಬಲಿಗರು ಚೆಂಡೆ, ಬ್ಯಾಂಡಿನೊಂದಿಗೆ ಅಕ್ರಮವಾಗಿ ಪ್ರವೇಶಿಸಿ, ಮನೆಯವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಾನಂದ ಬಂಗೇರ ರವರ ನಿವಾಸಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ರವರು ಭೇಟಿ ನೀಡಿದ್ದು, ಧೈರ್ಯ ತುಂಬಿದರು.

ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟ ಸದಸ್ಯರಾದ ಜಯಾನಂದ ಬಂಗೇರ ರವರ ಮನೆ ಅಂಗಳಕ್ಕೆ ಶಾಸಕರ ಬೆಂಬಲಿಗರು ಅಕ್ರಮವಾಗಿ ಪ್ರವೇಶಿಸಿ, ಮನೆಯವರಿಗೆ ಜೀವ ಬೆದರಿಕೆ ಹಾಕಿದ್ದು, ಆರೋಪಿಗಳನ್ನು ಯಾವ ಆಧಾರದ ಮೇಲೆ ಬಿಡುಗಡೆಗೊಳಿಸಿದ್ದೀರಿ ಎಂದು ಪುತ್ತೂರು ನಗರಠಾಣಾ ಇನ್ಸ್ಪೆಕ್ಟರ್ ಗೆ ಕರೆ ಮಾಡಿ ಮಾಜಿ ಶಾಸಕ ಸಂಜೀವ ಮಠಂದೂರು ಪ್ರಶ್ನಿಸಿದರು.
ದೇಶದಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಆರೋಪಿಗಳು ಈ ದುಷ್ಕೃತ್ಯ ವೆಸಗಿದ್ದಾರೆ. ಬಂಧನ ಮಾಡಿ ಯಾವ ಆಧಾರದ ಮೇಲೆ ಬಿಡುಗಡೆಗೊಳಿಸಿದ್ದೀರಿ ಎಂದು ಸಂಜೀವ ಮಠಂದೂರು ಪ್ರಶ್ನಿಸಿದರು.
ಸ್ಥಳೀಯ ನಗರ ಸಭಾ ಸದಸ್ಯರಾದ ಸುಂದರ ಪೂಜಾರಿ ಬಡಾವು, ಬಿಜೆಪಿ ಪುತ್ತೂರು ನಗರ ಮಂಡಲ ಕಾರ್ಯದರ್ಶಿ ಅಶೋಕ್ ಹಾರಾಡಿ, ಹಿಂದುಳಿದ ವರ್ಗಗಳ ಮಾಜಿ ಸದಸ್ಯ ಪುರುಷೋತ್ತಮ ಬಂಗೇರ ಮತ್ತು ಕಾರ್ಯಕರ್ತರು ಈ ವೇಳೆ ಜೊತೆಗಿದ್ದರು.

























