ಪುತ್ತೂರು : ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟ ಸದಸ್ಯರಾದ ಜಯಾನಂದ ಬಂಗೇರ ರವರ ಮನೆ ಅಂಗಳಕ್ಕೆ ಶಾಸಕರ ಬೆಂಬಲಿಗರು ಅಕ್ರಮವಾಗಿ ಪ್ರವೇಶಿಸಿ, ಮನೆಯವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಾನಂದ ಬಂಗೇರ ರವರ ನಿವಾಸಕ್ಕೆ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ರವರು ಭೇಟಿ ನೀಡಿದ್ದು, ಧೈರ್ಯ ತುಂಬಿದರು.

ಬಿಜೆಪಿ ಪ್ರಮುಖರಾದ ಆರ್.ಸಿ. ನಾರಾಯಣ್, ಗೋಪಾಲಕೃಷ್ಣ ಹೇರಳೆ, ನಿತೇಶ್ ಶಾಂತಿವನ,ವಿದ್ಯಾ ಆರ್. ಗೌರಿ, ಸಹಜ್ ರೈ ಬಳಜ್ಜ, ಯುವರಾಜ್ ಪೆರಿಯತ್ತೋಡಿ ಸಹಿತ ಹಲವರು ಉಪಸ್ಥಿತರಿದ್ದರು.

























