ಬೆಳ್ತಂಗಡಿ : ಮಂಗಳೂರು-ಹಾಸನ-ಬೆಂಗಳೂರಿಗೆ ಪೆಟ್ರೋನೆಟ್ ಪೈಫ್ ಮೂಲಕ ಸರಬರಾಜು ಆಗುವ ಡಿಸೇಲ್ ಅನ್ನು ರಂಧ್ರ ಕೊರೆದು ಕಳವುಗೈದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಆಲಡ್ಕ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆಟ್ರೊನೆಟ್ ಎಮ್.ಹೆಚ್. ಬಿ ಲಿಮಿಟೆಡ್ ನೆರಿಯಾದ ಸ್ಟೇಷನ್ ಇನ್ಚಾರ್ಜ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ಮಂಗಳೂರು ಹಾಸನ ಮತ್ತು ಬೆಂಗಳೂರಿಗೆ ಪೆಟ್ರೋನೆಟ್ ಪೈಫ್ ಮೂಲಕ ಡಿಸೇಲ್ ಸರಬರಾಜು ಆಗುತ್ತಿದ್ದು, ಮಾ.16ರ ರಾತ್ರಿಯಿಂದ ಮಾ.19ರ ರಾತ್ರಿಯ ಮಧ್ಯದ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿಂದ ಹಾದು ಹೋಗುವ ಡಿಸೇಲ್ ಪೈಫ್ ಲೈನ್ ಅನ್ನು ಯಾರೋ ಕಳ್ಳರು ಬೆಂಕಿ ಅಥವಾ ದಹನಕಾರಿ ವಸ್ತು ಎಂದು ತಿಳಿದಿದ್ದರೂ ಕೂಡಾ ನಿರ್ಲಕ್ಷ್ಯತನದಿಂದ, ರಂಧ್ರ ಕೊರೆದು ನಷ್ಟ ಉಂಟು ಮಾಡಿರುವುದಲ್ಲದೇ ಸದ್ರಿ ಪೈಫ್ ಲೈನಿಗೆ 2.5 ಇಂಚು ಹೆಚ್ ಡಿ ಪಿ ಇ ಪೈಪ್ ಮೂಲಕ ಅಂದಾಜು 12,000 ಲೀಟರ್ ಡಿಸೇಲ್ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಅದರ ಅಂದಾಜು ಮೌಲ್ಯ ರೂ 9,60,000/ ಆಗಬಹುದೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ: 19/2024 ಕಲಂ: 427,285, 379 ಐ ಪಿ ಸಿ ಕಲಂ 15(2) ಪೆಟ್ರೊನೆಟ್ ಕಾಯ್ದೆ ಕಲಂ 3(2) ಪ್ರಿವೆನ್ಸೆನ್ ಆಫ್ ಡ್ಯಾಮೆಜ್ ಟು ಪಬ್ಲಿಕ್ ಪ್ರಾಪರ್ಟಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

























