ಪುತ್ತೂರು : ದಶಮಾನೋತ್ಸವದ ಸಂಭ್ರಮದಲ್ಲಿರುವ ಖ್ಯಾತ ಮಳಿಗೆ ‘ಲಹರಿ’ ಡ್ರೈ ಫ್ರೂಟ್ಸ್ & ಮೋರ್ ನವೀಕೃತಗೊಂಡು ಮಾ.24 ರಂದು ಏಳ್ಮುಡಿ ಪೈ ಇಂಟರ್ನ್ಯಾಷನಲ್ ಬಳಿ ಶುಭಾರಂಭಗೊಳ್ಳಲಿದೆ.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿ ದೀಪ ಪ್ರಜ್ವಲಿಸಿ, ಆಶೀರ್ವಚನ ನೀಡಲಿದ್ದಾರೆ.
ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಸಮಾಜ ಸೇವಕರಾದ ಡಾ. ಗೌರಿ ಪೈ, ಪುತ್ತೂರು ಇನ್ನರ್ ವಿಲ್ ಕ್ಲಬ್ ನ ಅಧ್ಯಕ್ಷರಾದ ಅಶ್ವಿನಿ ಕೃಷ್ಣ ಮುಳಿಯ, ತಾಲೂಕು ಮಹಿಳಾ ಒಕ್ಕಲಿಗ ಸಂಘದ ಅಧ್ಯಕ್ಷರಾದ ವಾರಿಜಾ ಬೆಳ್ಳಿಯಪ್ಪ ಗೌಡ, ಶಾಂತೇರಿ ವಿಶ್ವಾಸ್ ಶೆಣೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


























