ಮುಕ್ಕೂರು : ಕಾರಣಿಕ ಶಕ್ತಿಯ ಐತಿಹ್ಯವುಳ್ಳ ದೇವಿ- ದೈವ ಶಕ್ತಿ ಸಾನಿದ್ಯಧ ನೆಲೆ ಮೇಲಿನ ಮುಕ್ಕೂರಿನ ತರವಾಡು ಕ್ಷೇತ್ರದಲ್ಲಿ ಸ್ಥಳ ಸಾನಿಧ್ಯಗಳ ಜೀರ್ಣೋದ್ಧಾರ ಕುರಿತಂತೆ ಭಕ್ತವೃಂದದ ಪೂರ್ವಭಾವಿ ಸಭೆಯು ಮಾ.24 ರಂದು ಸಂಜೆ 4 ಗಂಟೆಗೆ ಮೇಲಿನ ಮುಕ್ಕೂರಿನ ನಿವಾಸದಲ್ಲಿ ನಡೆಯಲಿದೆ. ಊರವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಮೇಲಿನ ಮುಕ್ಕೂರು ತರವಾಡು ಕ್ಷೇತ್ರ ಪ್ರಕಟಣೆಯಲ್ಲಿ ತಿಳಿಸಿದೆ.


























