ಬೆಂಗಳೂರು : ವೀಕ್ ಆಫ್ ಅಂತ ಎಣ್ಣೆ ಹೊಡೆಯೋರೋ ಹುಷಾರ್. ಟೈಟ್ ಆದ ಬಳಿಕ ಊಟ ಕೇಳುವ ನೆಪದಲ್ಲಿ ಹತ್ತಿರ ಬಂದು ವಂಚಿಸಿದ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ.
ಯುವಕನೋರ್ವನ ಬಲೆಗೆ ಬೆಸ್ಕಾಂ ಉದ್ಯೋಗಿ ಬಿದ್ದು ಮೋಸ ಹೋಗಿದ್ದು,. ಬರೋಬ್ಬರಿ 52 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ.
ಎಣ್ಣೆ ನಮ್ದು ಊಟ ನಿಮ್ದು
ಶ್ರೀನಿವಾಸ್ ಎಂಬ ಬೆಸ್ಕಾಂ ಉದ್ಯೋಗಿ ಮೋಸಹೋದವರು.
ವಾರದ ರಜೆ ಎಂದು ಅದಾಗಲೇ ಎರಡು ಬಾರ್ ನಲ್ಲಿ ಮಧ್ಯ ಸೇವೆಸಿದ್ದ ಶ್ರೀನಿವಾಸ್, ರಾತ್ರಿ ಊಟಕ್ಕೆಂದು ಮನೆಯಿಂದ ಮತ್ತೆ ಹೊರ ಬಂದಿದ್ದರು.
ಈ ವೇಳೆ ಹೋಟೆಲ್ ನಲ್ಲಿ ಹತ್ತಿರ ಬಂದ ಅಪರಿಚಿತ ಯುವಕ ಊಟ ಕೊಡಿಸುವಂತೆ ಕೇಳಿದ್ದ. ನಾನ್ ವೆಜ್ ಕೊಡಿಸಿದ ಕೂಡಲೇ ಅಪರಿಚಿತ ಯುವಕ ಶ್ರೀನಿವಾಸ್ ಕೈ ಹಿಡಿದಿದ್ದ. ಬಳಿಕ ಊಟ ನಿಮ್ದು ಎಣ್ಣೆ ನಂದು ಅಂತ ಬಲವಂತ ಮಾಡಿದ್ದಾನೆ. ಆ ಬಳಿಕ ಆತನ ಜೊತೆ ಮತ್ತೆ ಎಣ್ಣೆ ಹೊಡೆಯಲು ಶ್ರೀನಿವಾಸ್ ಹೋಗಿದ್ದಾರೆ.
ಎಣ್ಣೆ ಹೊಡೆಯುತ್ತಾ ಟೈಟ್ ಆದ ಬಳಿಕ ಶ್ರೀನಿವಾಸ್ ಜೇಬಿನಲ್ಲಿದ್ದ 52 ಸಾವಿರ ನಗದನ್ನು ಎಗರಿಸಿ ಯುವಕ ಪರಾರಿಯಾಗಿದ್ದಾನೆ. ಈ ವಿಚಾರಗೊತ್ತಾದಂತೆ ಮರುದಿನ ಶ್ರೀನಿವಾಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.
ದೂರಿನ ಹಿನ್ನಲೆ ಚಂದ್ರಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರಿಂದ ತನಿಖೆ ಮುಂದುವರೆದಿದೆ.


























