ಪುತ್ತೂರು : ಕೂಲಿ ಕಾರ್ಮಿಕರ ನಡುವೆ ನಡೆದ ಹೊಡೆದಾಟಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾಂ ಮೂಲದ ಆನಂದ ಬಂದಾವಿ ಎಂಬವರು ನೀಡಿರುವ ದೂರಿನ ಮೇರೆಗೆ ಅವಿನಾಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.
ಆನಂದ ಬಂದಾವಿ ಅವರು ಮಾ.25 ರಂದು ಬೆಳಿಗ್ಗೆ, ಕೂಲಿ ಕೆಲಸಕ್ಕಾಗಿ ಬೆಳಗಾಂನಿಂದ ಪುತ್ತೂರಿಗೆ ಬಂದವರು, ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಪರಿಚಯದ ಅವಿನಾಶ್ , ನಾರಾಯಣ, ದುರ್ಗೇಶ್ ಮತ್ತು ಹರೀಶ್ ಎಂಬವರುಗಳೊಂದಿಗೆ ಕುಳಿತುಕೊಂಡು ಮಾತನಾಡುತ್ತಿದ್ದಾಗ, ಅವಿನಾಶ್ ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುತ್ತಾನೆ.
ಬಳಿಕ ಆನಂದ ಅವರು ಅಲ್ಲಿಂದ ತೆರಳಿ ಸ್ವಲ್ಪ ದೂರ ನಿಂತಿದ್ದಾಗ, ಅಲ್ಲಿಗೆ ಬಂದ ಅವಿನಾಶ್ ಕೊಲೆ ಮಾಡುವುದಾಗಿ ಹೇಳಿ, ಕೈಯಲ್ಲಿದ್ದ ಚಾಕುವಿನಿಂದ ಹಲ್ಲೆ ಮಾಡಿದ್ದು, ಈ ವೇಳೆ ಇತರರು ಬರುವುದನ್ನು ಕಂಡು ಅಲ್ಲಿಂದ ತೆರಳಿದ್ದು, ಗಾಯಗೊಂಡ ಆನಂದ ರವರು ಚಿಕಿತ್ಸೆಗಾಗಿ ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ:30 /2024 ಕಲಂ: 341,504,323, 307 ಐ.ಪಿ.ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




























