ಕುಂದಾಪುರ : ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ಆಕಸ್ಮಿಕ ವಾಗಿ ಬಿದ್ದು ಮೃತಪಟ್ಟಿದ್ದಾರೆ.
ಅಡಿಟರ್ ಪ್ರತಾಪ್ ನಾಯಕ್ ಹಾಗೂ ಅವರ ಪತ್ನಿ ಲಕ್ಷ್ಮಿ (41) ಮೃತರು.
ಲಕ್ಷ್ಮಿ ಅವರು ಪತಿ, ಇಬ್ಬರು ಮಕ್ಕಳೊಂದಿಗೆ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದರು.
ರವಿವಾರ ಸಂಜೆ ಅಪಾರ್ಟ್ಮೆಂಟ್ ನ 5ನೇ ಮಹಡಿಯ ಟೆರೇಸ್‌ನಲ್ಲಿ ತೆಂಗಿನ ಕಾಯಿಗಳನ್ನು ಒಣಗಲು ಇಟ್ಟಿದ್ದನ್ನು ತರಲು ಹೋದ ಲಕ್ಷ್ಮಿ ಅವರು ಆಕಸ್ಮಿಕವಾಗಿ ಟೆರೇಸಿನ ಬದಿಯಲ್ಲಿ ಅಳವಡಿಸಿದ ಫೈಬರ್ ಶೀಟನ್ನು ಮೆಟ್ಟಿ ಅದು ತುಂಡಾಗಿ ಆಯತಪ್ಪಿ ಅಲ್ಲಿಂದ ಎರಡನೇ ಮಹಡಿಗೆ ಬಿದ್ದು, ತಲೆಗೆ ತೀವ್ರ ಗಾಯಗೊಂಡಿದ್ದರು.
ಈ ಬಗ್ಗೆ ತಿಳಿದ ತಕ್ಷಣ ಆಗಮಿಸಿದ ಪೊಲೀಸರು ಹಾಗೂ ಅಪಾರ್ಟ್ಮೆಂಟ್ ನವರು ಲಿಫ್ಟ್ ಜಾಗದಲ್ಲಿ ಸಿಲುಕಿಕೊಂಡಿದ್ದ ಮಹಿಳೆಯನ್ನು ಹೊರತೆಗೆಯಲು ಸಾಹಸಪಟ್ಟರು. ಕೊನೆಗೆ ಲಿಫ್ಟ್‌ಗಾಗಿ ಅಳವಡಿಸಿದ್ದ ಕಬ್ಬಿಣದ ಸರಳನ್ನು ಕಾರ್ಯಾಚರಣೆ ಮೂಲಕ ಕತ್ತರಿಸಿ ದೇಹವನ್ನು ಹೊರತೆಗೆಯಲಾಯಿತು.
ಕುಂದಾಪುರ ಸರಕಾರಿ ಆಸ್ಪತ್ರೆಗೆ ತಂದಾಗ ಪರೀಕ್ಷಿಸಿದ ವೈದ್ಯರು ಲಕ್ಷ್ಮಿ ಅವರು ಮೃತಪಟ್ಟಿದ್ದಾಗಿ ತಿಳಿಸಿದರು.
ಮೃತರು ಪತಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಘಟನೆ ಕುರಿತಂತೆ ಪ್ರಕರಣ ದಾಖಲಾಗಿದೆ.




























