ಬೆಂಗಳೂರು : ‘ಮೈನಾ’ ಸಿನಿಮಾದಂತಾ ಕಥೆಯೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಹೀರೋ ಹಣ ಪಡೆದು ವಂಚಿಸಿದಲ್ಲದೆ ವಿಲನ್ ಆಗಿ ಕಾಣಿಸಿಕೊಂಡಿದ್ದಾನೆ.
ವಿಶೇಷ ಚೇತನಳನ್ನ ಮದುವೆ ಆಗುವುದಾಗಿ ಹಣ ಪಡೆದು ವಂಚಿಸಿದ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಸುರೇಂದ್ರ ಮೂರ್ತಿ ಎಂಬಾತ ವಂಚನೆ ಮಾಡಿದ ವ್ಯಕ್ತಿ.
ಮೊದಲು ಪರಿಚಯವಾಗಿ ಬಳಿಕ ಅವರಿಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಇದಾದ ಬಳಿಕ ಸುರೇಂದ್ರ ಮೂರ್ತಿ ಬ್ಯುಸಿನೆಸ್ ಮಾಡಲು ಹಣ ಬೇಕೆಂದು ಕೇಳಿದ್ದನು. ಅದಕ್ಕೆ ಯುವತಿ ಸಾಲಮಾಡಿ, ತನ್ನ ಬಳಿಯಿದ್ದ ಚಿನ್ನ ಅಡವಿಟ್ಟು ಹಣ ನೀಡಿದ್ದಳು.
ಹಣವೆಲ್ಲ ಪಡೆದ ಬಳಿಕ ಸುರೇಂದ್ರ ಮೂರ್ತಿ ಮದುವೆಯಾಗದೆ ವಂಚಸಿದ್ದಾನೆ. ಈ ವೇಳೆ ಲೈಂಗಿಕವಾಗಿಯೂ ಬಳಸಿಕೊಂಡಿರುವ ಆರೋಪ ಆತನ ಮೇಲೆ ಕೇಳಿಬಂದಿದೆ. ಸದ್ಯ ವಿಶೇಷ ಚೇತನ ಯುವತಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಎಫ್.ಐ.ಆರ್ ದಾಖಲಾಗಿದೆ.



























