ಸುಬ್ರಹ್ಮಣ್ಯ : ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದು ಹೇಳಿದ್ದಕ್ಕೆ ವ್ಯಕ್ತಿಯೋರ್ವ ಕತ್ತಿಯಿಂದ ಹಲ್ಲೆ ನಡೆಸಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಪ ನಿವಾಸಿ ರಮೇಶ್ ಕೆ ಎಂಬವರು ನೀಡಿರುವ ದೂರಿನ ಮೇರೆಗೆ ಸುಂದರ ಹೊಸ್ಮಠ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ರಮೇಶ್ ಕೆ. ಹೆಂಡತಿ ಮತ್ತು ಸಣ್ಣ ಮಗನೊಂದಿಗೆ ಬಳ್ಪದ ಮನೆಯಲ್ಲಿ ವಾಸವಾಗಿದ್ದು, ಮಾ.26 ರಂದು ಸಂಜೆ ಮನೆಯಲ್ಲಿರುವಾಗ, ಅವರ ಸಂಬಂಧಿಕರಾದ ಸುಂದರ ಹೊಸ್ಮಠ ಎಂಬವರು ಮನೆಗೆ ಬಂದು ಕುಳಿತುಕೊಂಡು ಜೋರಾಗಿ ಮಾತನಾಡುತ್ತಿದ್ದು, ಈ ವೇಳೆ ರಮೇಶ್ ರವರು ಸಣ್ಣ ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದು ತಿಳಿಸಿರುತ್ತಾರೆ. ಇದರಿಂದ ಕುಪಿತನಾದ ಸುಂದರ ಎಂಬವರು ಕತ್ತಿಯಿಂದ ಹಲ್ಲೆ ನಡೆಸಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ :22 /2024 ಕಲಂ: 324 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



























