ಬೆಳ್ತಂಗಡಿ : ತುಮಕೂರಿನಲ್ಲಿ ನಡೆದ ತ್ರಿಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಪಟ್ಟ ಮೂವರ ಮೃತದೇಹವನ್ನು ಶುಕ್ರವಾರ (ಮಾ.29) ಮುಂಜಾನೆ ಬೆಳ್ತಂಗಡಿಗೆ ತರಲಾಗಿದೆ.

ಹಣದ ಆಸೆಗೆ ಮಾ.22ರಂದು ಮೂವರನ್ನು ಕೊಲೆ ಮಾಡಿ ಕಾರಿನಲ್ಲಿ ಹಾಕಿ ಬೆಂಕಿ ಹಚ್ಚಿ ಸುಡಲಾಗಿತ್ತು. ತನಿಖೆ ಬಳಿಕ ಮೃತದೇಹವನ್ನು ಡಿಎನ್‌ಎ ಪರೀಕ್ಷೆ ಮೂಲಕ ಪತ್ತೆ ಹಚ್ಚಲಾಗಿದೆ. ಘಟನೆ ನಡೆದ ಏಳು ದಿನಗಳ ಬಳಿಕ ಸಂಬಂಧಪಟ್ಟವರಿಗೆ ಮೃತದೇಹವನ್ನು ತಲುಪಿಸಲಾಗಿದೆ.
ಮೃತಪಟ್ಟ ಶಾಹುಲ್ ಹಮೀದ್ ಹಾಗೂ ಇಸಾಕ್ ಅವರ ಮೃತದೇಹ ಮೊಯ್ಯುದ್ದೀನ್ ಜುಮಾ ಮಸೀದಿ ಹಳೆಪೇಟೆಗೆ ಮತ್ತು ಸಿದ್ದೀಕ್ ಅವರ ಮೃತದೇಹ ಶಿರ್ಲಾಲ್ ಮಸೀದಿಗೆ ತಲುಪಿದ್ದು, ಅಲ್ಲಿ ಅಂತಿಮ ದರ್ಶನ ಹಾಗೂ ವಿಧಿ ವಿಧಾನ ನೆರವೇರಲಿದೆ.



























