ಉಪ್ಪಿನಂಗಡಿ : ‘ಟೀಮ್ ಕಲ್ಲೇಗ ಟೈಗರ್ಸ್’ ಇದರ ಅದ್ಧೂರಿ ಹುಲಿವೇಷ ಪ್ರದರ್ಶನ ಕಾರ್ಯಕ್ರಮ ಉಪ್ಪಿನಂಗಡಿ ಕಂಬಳ ಕರೆಯ ಬಳಿ ಮಾ.31 ಸಂಜೆ ನಡೆಯಲಿದೆ.
ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ಉಬಾರ್ ಕಂಬಳ ಉತ್ಸವ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಜಿಲ್ಲೆ, ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿರುವ ಪುತ್ತೂರಿನ ಖ್ಯಾತ ಹುಲಿ ವೇಷ ತಂಡ ‘ಕಲ್ಲೇಗ ಟೈಗರ್ಸ್’ ಅದ್ದೂರಿ ಹುಲಿವೇಷ ಪ್ರದರ್ಶನ ನೀಡಲಿದೆ.




























