ಕಡಬ : ದನ ಸಾಗಾಟದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮರ್ದಾಳದಲ್ಲಿನಡೆದಿದೆ.
ಮರ್ದಾಳ ನೆಕ್ಕಿತ್ತಡ್ಕ ಸಮೀಪದ ಅಚ್ಚಿಲಪಟ್ಟೆ ನಿವಾಸಿ ವಿಠಲ ರೈ (65) ಮೃತ ವ್ಯಕ್ತಿ.

ಮರ್ದಾಳ ಪೇಟೆಯಲ್ಲಿ ವಿಠಲ ರೈ ಯವರು ಕಾರನ್ನು ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು ಅವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ
ಅಪಘಾತವೆಸಗಿದ ಕಾರು ಪರಾರಿಯಾಗಿದ್ದು, ನೆಕ್ಕಿತ್ತಡ್ಕ ಒಳ ರಸ್ತೆಯಲ್ಲಿ ಮನೆಯೊಂದರ ಬಳಿ ಪತ್ತೆಯಾಗಿದೆ. ಕಾರಿನಲ್ಲಿದ್ದ ಜಾನುವಾರನ್ನು ಕಾರಿನಿಂದ ಕೆಳಗಿಳಿಸಿ ಕಟ್ಟಿ ಹಾಕಲಾಗಿದೆ.
ಸ್ಥಳದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ್ದು, ಅಪಘಾತ ಮಾಡಿದ ಆರೋಪಿಗಳನ್ನು ಬಂಧಿಸುವ ತನಕ ಮೃತದೇಹದ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆನ್ನಲಾಗಿದೆ.
ಆಸ್ಪತ್ರೆಯ ಮುಂದೆ ಪ್ರತಿಭಟನೆಗೆ ಕರೆ ನೀಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದು ತನಿಖೆ ನಡೆಸುತ್ತಿದ್ದಾರೆ.