ಬೆಂಗಳೂರು : ರಾತ್ರಿ ಚೆನ್ನಾಗಿದ್ದ ಬೈಕ್ ಬೆಳಗಾಗೋಷ್ಟರಲ್ಲಿ ಸುಟ್ಟು ಕರಕಲದ ಘಟನೆ ರಾಜಧಾನಿಯಲ್ಲಿ ನಡೆದಿದೆ.
ಜೆ.ಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿ, ಚಾಮುಂಡಿನಗರದಲ್ಲಿ ಈ ಅವಘಡ ಸಂಭವಿಸಿದೆ.
ಮಧ್ಯರಾತ್ರಿ ಎಲ್ಲರೂ ಊಟ ಮುಗಿಸಿ ಅರ್ಧ ನಿದ್ರೆ ಮುಗಿಸಿದ್ರು. ಆದ್ರೆ ಆಗ ಏಕಾಏಕಿ ಕಾಣಿಸಿಕೊಂಡಿದ್ದ ಬೆಂಕಿ ಇಲ್ಲಿದ್ದ ಜನರ ನಿದ್ರೆ ಕೆಡಿಸಿತ್ತು. ಏನೋ ಹೊಗೆ ಬರ್ತಿದೆ ಅಂತ ಹೊರಗೆ ಬಂದು ನೋಡಿದ ಜನರಿಗೆ ಶಾಕ್ ಕಾದಿತ್ತು. ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್ಗಳು ಸುಟ್ಟು ಕರಕಲಾಗಿರೋದ್ರಿಂದ ಅದ್ರ ಮಾಲೀಕರು ಕಣ್ಣೀರಿಟ್ಟಿದ್ದಾರೆ. ಈ ಘಟನೆ ಹಿಂದೆ ಪುಂಡರ ಕೈಚಳಕ ಇರಬಹುದು ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ ಸ್ಥಳೀಯರು.
ಅವಘಡದಲ್ಲಿ 2 ಡಿಯೋ ಬೈಕ್, 1 ಡ್ಯೂಕ್, 1 ಹೋಂಡಾ ಕಂಪನಿ ಶೈನ್ ಬೈಕ್ ಸುಟ್ಟು ಹೋಗಿದ್ದು, ಬಿಲ್ಡಿಂಗ್ ಕರಕಲಾಗಿದೆ. ಇತ್ತ ಎರಡು ಪಕ್ಷಿಗಳು ಸಾವನಪ್ಪಿದೆ. ಸಮಯ ಪ್ರಜ್ಞೆಯಿಂದ ಬೇರೆ ವಾಹನಗಳು ಬೆಂಕಿಗಾಹುತಿ ಆಗೋದನ್ನ ತಪ್ಪಿಸಲಾಗಿದೆ. ಸದ್ಯ ಇಷ್ಟೆಲ್ಲಾ ಅವಘಡ ಸಂಭವಿಸಿದ್ರು ಬೆಂಕಿ ಹೊತ್ತಿಕೊಂಡಿದ್ದಕ್ಕೆ ಕಾರಣ ಏನು ಅನ್ನೋದು ಇನ್ನೂ ತಿಳಿದುಬಂದಿಲ್ಲ.


























