ಪುತ್ತೂರು : ಲೋಕಸಭಾ ಚುನಾವಣೆ ಕಾವು ಜೋರಾಗಿದ್ದು, ಎಲ್ಲ ಪಕ್ಷಗಳು ಭರ್ಜರಿ ಪ್ರಚಾರ ಮಾಡುತ್ತಿವೆ.. ಆದ್ರೇ ಪುತ್ತೂರಿನ ತಾಲೂಕಿನ ಗ್ರಾಮವೊಂದರಲ್ಲಿ ಚುನಾವಣಾ ಬಹಿಷ್ಕಾರದದ ಬ್ಯಾನರ್ ಅಳವಡಿಸಲಾಗಿದೆ.

ಚಿಕ್ಕಮುಡ್ನೂರು ಎಣಿಮುಗೇರು ಬಡೆಕಾಯದೆಯಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ.

ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ದಾರಿದೀಪದ ಅವ್ಯವಸ್ಥೆಯನ್ನು ವಿರೋಧಿಸಿ ಚಿಕ್ಕಮುಡ್ನೂರು ಎಣಿಮುಗೇರು ಬಡೆಕಾಯದೆ ಚುನಾವಣಾ ಮತಗಟ್ಟೆ 135ರ ವ್ಯಾಪ್ತಿಯ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.

























