ಪುತ್ತೂರು : ಅರ್ಜುನ್ ಯೂತ್ ಕ್ಲಬ್ ಮಂಜಲ್ಪಡ್ಪು ಇದರ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಪ್ರಯುಕ್ತ ಅರೆಹೊಳೆ ಪ್ರತಿಷ್ಠಾನದ ಕಲಾತಂಡ ನಂದಗೋಕುಲದಿಂದ ನಾಟ್ಯ ವೈಭವ ಕಾರ್ಯಕ್ರಮ ಏ.10 ರಂದು ನಡೆಯಲಿದೆ.
ಏ.10 ರಂದು ಸಂಜೆ 7 ಗಂಟೆಯಿಂದ ಮಂಜಲ್ಪಡ್ಪುವಿನಲ್ಲಿ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮವನ್ನು ಮಾಸ್ಟರ್ ಪ್ಲಾನರಿ ಮಾಲಕರಾದ ಎಸ್.ಕೆ ಆನಂದ್, ವಿಜಯ ಶಾಮಿಯಾನದ ಮಂಜುನಾಥ ಭಟ್ ಉದ್ಘಾಟಿಸಲಿದ್ದಾರೆ.
ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.


























