ಉತ್ತರ ಪ್ರದೇಶ : ಕಂಟಪೂರ್ತಿ ಕುಡಿದು ಪಾರ್ಕ್ ಬೆಂಚ್ ಮೇಲೆ ಮಲಗಿದ್ದ ವ್ಯಕ್ತಿಯ ತಲೆ ಬೆಂಚಿನ ಸಂಧಿಯ ನಡುವೆ ಸಿಲುಕಿಕೊಂಡಿದ್ದ ಘಟನೆ ಕಾನ್ಪುರದ ರಾಮಲೀಲಾ ಪಾರ್ಕ್ ನಡೆದಿದೆ.
ಕುಡಿದ ಮತ್ತಿನಲ್ಲಿ ಮಲಗಿದ್ದ ವ್ಯಕ್ತಿ ಎಚ್ಚರಗೊಳ್ಳುವ ಹೊತ್ತಿಗೆ ಬೆಂಚಿನ ಅಂತರದ ನಡುವೆ ಸಿಲುಕಿ ಕೊಂಡಿರುವುದು ಗೊತ್ತಾಗಿದೆ.
ಕಾನ್ಪುರ ಪೊಲೀಸರ ಪ್ರಕಾರ, ಭಾನುವಾರ ಮಧ್ಯರಾತ್ರಿ ಒಂದು ಗಂಟೆಯ ನಂತರ ಕರೆ ಬಂದಿದೆ. ಉದ್ಯಾನವನದ ಬೆಂಚಿನ ನಡುವಿನ ಸಂಧಿಯಲ್ಲಿ ವ್ಯಕ್ತಿಯೊಬ್ಬ ಸಿಲುಕಿರುವುದು ತಿಳಿದುಬಂದಿದ್ದು, ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ವ್ಯಕ್ತಿಯನ್ನು ರಕ್ಷಿಸಲಾಗಿದೆ.
ಟ್ವಿಟರ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದು, ಸದ್ಯ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ವ್ಯಕ್ತಿಯ ನೆರವಿಗೆ ಬಂದ ಪೊಲೀಸರಿಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.



























