ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದ ಬೇಸತ್ತ ಸಿಟಿ ಮಂದಿ ಹಣ್ಣು, ಜ್ಯೂಸ್ ಮೊರೆ ಹೊಗ್ತಿದ್ದಾರೆ. ಆದ್ರೆ, ಇನ್ಮುಂದೆ ಬೀದಿ ಬದಿಯಲ್ಲಿ ನೀವು ಗಂಟೆಗಟ್ಟಲೇ ತೆರೆದಿಟ್ಟ ಹಣ್ಣು ತಿನ್ನೋ ಹಾಗ್ ಇಲ್ಲ. ಇದು ವ್ಯಾಪಾರಿಗಳಿಗೆ ತಲೆನೋವಾಗೋದಂತು ಪಕ್ಕಾ.
ಬನಾನಾ.. ಪಪ್ಪಾಯ.. ಆ್ಯಪಲ್.. ಪೈನಾಪಲ್.. ಈ ಮಿಕ್ಸಡ್ ಫ್ರೂಟ್ಸ್ ಅಂದ್ರೆ ಬಹುತೇಕರಿಗೆ ಅಚ್ಚುಮೆಚ್ಚು. ಬಾಯಿ ಚಪ್ಪರಿಸಿ ತಿನ್ತಾರೆ. ಆದ್ರೆ ಇನ್ಮುಂದೆ ಕಟ್ ಮಾಡಿರೋ ಹಣ್ಣು ತಿನ್ನೋ ಹಾಗಿಲ್ಲ. ಕಾಲರಾ ಆತಂಕ ಇರೋದ್ರಿಂದ ಪಾಲಿಕೆ ಈ ನಿರ್ಧಾರ ಮಾಡಿದೆ.
ಹೌದು, ಕಾಲರಾ ಅನ್ನೋ ವಿಚಿತ್ರ ರೋಗ ಕಾಣಿಸಿಕೊಳ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳು ಹಣ್ಣುಗಳನ್ನ ಮೊದ್ಲೇ ಕಟ್ ಮಾಡಿ ಮಾರಾಟ ಮಾಡೋದನ್ನ ಬ್ಯಾನ್ ಮಾಡಲು ಚಿಂತನೆ ನಡೆಸಿದೆ. ಹೀಗೆ ಸಿಕ್ಕ ಸಿಕ್ಕಲ್ಲಿ ಮೊದ್ಲೇ ಕಟ್ ಮಾಡಿರೋ ಇಂತಹ ಫ್ರೂಟ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದ್ರ ಬದಲು ಗ್ರಾಹಕರು ಬಂದಾಗ ಕಟ್ ಮಾಡಿ ಕೊಡ್ಬೇಕು. ಜನರ ಡಿಮ್ಯಾಂಡ್ಗೆ ತಕ್ಕನಾಗಿ ಸಪ್ಲೈ ಮಾಡ್ಬೇಕು ಅಂತ ಆರೋಗ್ಯ ಇಲಾಖೆಯ ವಿಶೇಷ ಆಯುಕ್ತರು ಎಲ್ಲಾ ಹೆಲ್ತ್ ಇನ್ಸ್ಪೆಕ್ಟರ್ಗಳಿಗೂ ಮೌಖಿಕವಾಗಿ ಆದೇಶ ನೀಡಿದ್ದಾರೆ ಎನ್ನಲಾಗಿದೆ.
ಕಲುಷಿತ ನೀರು, ಕಟ್ ಮಾಡಿದ ಹಣ್ಣುಗಳನ್ನ ತಿನ್ನೋದ್ರಿಂದ ಕಾಲಾರ ಬರುತ್ತೆ. ಇದ್ರಿಂದ ತಪ್ಪಿಸಿಕೊಳ್ಳಲು, ಕಾಲಾರದ ಕರಾಳ ಓಟಕ್ಕೆ ಬ್ರೇಕ್ ಹಾಕಲು ಇಲಾಖೆ ಪ್ಲಾನ್ ಮಾಡ್ಕೊಂಡಿದೆ. ಆದ್ರೆ ಈ ನಿಯಮ ಜನರ ಸುರಕ್ಷತೆಗಾಗಿ ಕಟ್ಟುನಿಟ್ಟಾಗಿ ಪಾಲನೆಯಾಗಬೇಕಷ್ಟೇ.


























