ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಎಸ್.ಪಿ.ಜಿ ಅಧಿಕಾರಿಗಳು ಇಂದು ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಧಾನಿ ಮೋದಿ ಅವರ ಭದ್ರತೆಯ ಹೊಣೆಯನ್ನು ಎಸ್.ಪಿ.ಜಿ ಪಡೆ ನಿರ್ವಹಿಸಲಿದೆ.
ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋನ ರೂಟ್ ಮ್ಯಾಪ್ ಸಿದ್ದವಾಗಿದ್ದು, ಪ್ರಧಾನಿ ಮೋದಿಯವರು ತೆರಳುವ ರಸ್ತೆಯುದ್ದಕ್ಕೂ ಎಸ್.ಪಿ.ಜಿ ಹಾಗೂ ಐಬಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಕಾರ್ಯಕ್ರಮದ ಬಗ್ಗೆ ಬಿಜೆಪಿ ಮುಖಂಡರಿಂದ ಮಾಹಿತಿ ಪಡೆದರು.
ಮಂಗಳೂರಿನ ನಾರಾಯಣ ಗುರು ವೃತ್ತದಿಂದ ಹಂಪನಕಟ್ಟೆವರೆಗೆ ಮೋದಿ ಮೆಗಾ ರೋಡ್ ಶೋ ನಡೆಯಲಿದ್ದು, ಎ.14ರ ಸಂಜೆ 6 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಆರಂಭವಾಗಲಿದೆ.
ಸಂಜೆ 6 ಗಂಟೆ ಸುಮಾರಿಗೆ ನಾರಾಯಣ ಗುರು ಸರ್ಕಲ್ ಬಳಿ ಮೋದಿ ಆಗಮಿಸಲಿದ್ದಾರೆ.
ಮೋದಿ ರೋಡ್ ಶೋ ನಡೆಸುವ ರಸ್ತೆಯುದ್ದಕ್ಕೂ ಎಸ್ ಪಿ ಜಿ ಅಧಿಕಾರಿಗಳ ತಂಡ ಕುಲಂಕುಶವಾಗಿ ಪರಿಶೀಲನೆ ನಡೆಸಿತು.


























