ಮಂಗಳೂರು : ಮನೆಯ ಬಾವಿಯಿಂದ ನೀರು ಸೇದುತ್ತಿದ್ದಾಗ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯೋರ್ವರನ್ನು ಕದ್ರಿ ಅಗ್ನಿಶಾಮಕ ಠಾಣೆಯವರು ರಕ್ಷಿಸಿ ಮಹಿಳೆಗೆ ಮರುಜೀವ ನೀಡಿದ್ದಾರೆ.
ಸುಮಾರು 58 ವರ್ಷ ವಯಸ್ಸಿನ ಮಹಿಳೆ ಸಂಜೆ ವೇಳೆ ನೀರು ಸೇದುತ್ತಿದ್ದಾಗ ತಲೆ ಸುತ್ತು ಬಂದಂತೆ ಆಗಿ ಬಾವಿಗೆ ಬಿದ್ದರು. ಅಗ್ನಿಶಾಮಕದಳದವರು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದರು.
ಬಾವಿಯಲ್ಲಿ ಎಂಟು ಅಡಿಗಳಿಗೂ ಹೆಚ್ಚು ನೀರಿತ್ತು. ಮಹಿಳೆ ಪಂಪ್ ನ ಹಗ್ಗ ಹಿಡಿದುಕೊಂಡು ನಿಂತಿದ್ದರು ಎಂದು ಅಗ್ನಿಶಾಮಕದಳದ ಅಧಿಕಾರಿಗಳು ತಿಳಿಸಿದ್ದಾರೆ.
ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ರಾಜೀವ, ಪ್ರಮುಖ ಅಗ್ನಿಶಾಮಕ ಚಂದ್ರಹಾಸ ಸಾಲ್ಯಾನ್, ಅಗ್ನಿಶಾಮಕರಾದ ದಯಾಕರ, ಪುನೀತ್, ಶಿವರಾಜ್, ಪವನ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

























