ಕೊಡಗು : ಬಿಸಿಲು, ಬಿಸಿಲು, ರಣ ಬಿಸಿಲಿಗೆ ರೋಸಿ ಹೋಗಿದ್ದ ರಾಜ್ಯದ ಜನರಿಗೆ ಮಳೆರಾಯ ಕೃಪೆ ತೋರಿದ್ದಾನೆ. ಇಂದು ಕೊಡಗಿನ ಹಲವೆಡೆ ಮೊದಲ ಮಳೆಯ ಸಿಂಚನವಾಗಿದ್ದು, ಬಿಸಿಲಿಗೆ ಬೇಸತ್ತಿದ್ದ ಜನರು ಸಖತ್ ಖುಷಿ ಪಟ್ಟಿದ್ದಾರೆ.
ಕೊಡಗಿನಲ್ಲಿ ಸುರಿದ ಮೊದಲ ಮಳೆಯ ಖುಷಿ ಎಷ್ಟಿತ್ತು ಅಂದ್ರೆ, ಮಳೆಗೆ ಕೊಡಗಿನ ಜನರು ಕುಣಿದು ಕುಪ್ಪಳಿಸಿದ್ದಾರೆ. ಶ್ರೀಮಾರಿಯಮ್ಮ ಹಾಗೂ ಕೊರಗಜ್ಜದೇವರ ವಾರ್ಷಿಕ ಉತ್ಸವದಲ್ಲಿ ನೆರೆದಿದ್ದ ಭಕ್ತಾದಿಗಳು ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.
ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಹೊದ್ದೂರು ಗ್ರಾಮದ ಭಗವತಿ ಕಾಲೋನಿಯಲ್ಲಿ ಕೊರಗಜ್ಜ ದೈವದ ವಾರ್ಷಿಕ ಉತ್ಸವ ನಡೆಯುತ್ತಿತ್ತು. ಈ ವೇಳೆ ಹಲವು ದಿನಗಳಿಂದ ಮಳೆಗಾಗಿ ಕಾಯುತ್ತಿದ ಜನ್ರು ಮೊದಲ ಮಳೆಯಾಗುತ್ತಿದಂತೆ ಮಳೆಯಲ್ಲೇ ಸಖತ್ ಡ್ಯಾನ್ಸ್ ಮಾಡಿದರು.
ಮೊದಲ ಮಳೆ ಹನಿಗೆ ಹಿರಿಯರು ಮಕ್ಕಳೆನ್ನದೇ ಕೊಡಗಿನ ವಾಲಗಕ್ಕೆ ಭಕ್ತಾಧಿಗಳು ಹೆಜ್ಜೆ ಹಾಕುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ.



























