ಪುತ್ತೂರು: ಕಾರು ನಿಲ್ಲಿಸಿ ಹಲ್ಲೆ ನಡೆಸಿದ ಮತ್ತು ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆದ ಪ್ರತ್ಯೇಕ ಆರೋಪಗಳನ್ನು ಹೊರಿಸಿ ಬನ್ನೂರಿನ ರಿಯಲ್‌ಎಸ್ಟೇಟ್ ಉದ್ಯಮಿಗಳಿಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಪೊಲೀಸರು ಇವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಉದ್ಯಮಿ ರೋಶನ್ ರೈ ಮತ್ತು ಬೈಕ್ ಸವಾರ ದಾವೋದ್ ಅವರು ಪರಸ್ಪರ ಆರೋಪ ಹೊರಿಸಿದ್ದು, ಪುತ್ತೂರು ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮಂಜಲ್ಪಡ್ಪುವಿನ ಜಾಗದಲ್ಲಿ ಮಣ್ಣು ತೆಗೆಯುವ ವಿಷಯವಾಗಿ ರೋಶನ್ ರೈ ಮತ್ತು ದಾವೂದ್ ನಡುವೆ ಭಿನ್ನಾಭಿಪ್ರಾಯವಿದ್ದು ಈ ವಿಷಯವಾಗಿ ದಾವೂದ್ ಪುತ್ತೂರು ಕಾಂಗ್ರೆಸ್ ಗ್ರೂಪ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಐಬಿ ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ನಕಲಿ ಸಂದೇಶ ಒಂದನ್ನು ರವಾನಿಸಿದ್ದು, ಈ ವಿಷಯವಾಗಿ ರೋಶನ್ ರೈ ಬನ್ನೂರು ಮತ್ತು ದಾವೂದ್ ನ ನಡುವೆ ಚರ್ಚೆ ನಡೆದಿದ್ದು, ಪರಸ್ಪರ ಹಲ್ಲೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.