ಸುಳ್ಯ : ನದಿ ನೀರಿನಲ್ಲಿ ಮುಳುಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಂಡೆಕೋಲು ಗ್ರಾಮ ಮುರೂರು ಸಮೀಪ ಪರಪ್ಪೆ ನದಿಯಲ್ಲಿ ನಡೆದಿದೆ.
ಈಶ್ವರಮಂಗಲದ ಪ್ರವೀಣ್ ಮೃತ ವ್ಯಕ್ತಿ.

ಈಶ್ವರಮಂಗಲದ ನಾಲ್ಕು ಜನ ಮುರೂರು ಸಮೀಪ ಪರಪ್ಪೆ ನದಿಗೆ ಮೀನು ಹಿಡಿಯಲು ಬಂದಿದ್ದರೆನ್ನಲಾಗಿದೆ.
ಈ ವೇಳೆ ನಾಲ್ವರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತದೇಹವನ್ನು ಪೈಚಾರ್ ತಜ್ಞರ ತಂಡ ನದಿಯಿಂದ ಮೇಲೆತ್ತಿದ್ದು, ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ ಎಂದು ವರದಿಯಾಗಿದೆ.

























