ಮಂಗಳೂರು : ಚುನಾವಣಾ ಪ್ರಚಾರ ವಿಷಯವಾಗಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಗಿ ಹೊಯ್ ಕೈ ಹಂತಕ್ಕೆ ತಲುಪಿದ ಘಟನೆ ಮಂಗಳೂರಿನ ಉರ್ವದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಉರ್ವ ಚಿಲಿಂಬಿ ಸಾಯಿ ಬಾಬಾ ಮಂದಿರದ ಬಳಿ ಈ ಘಟನೆ ನಡೆದಿದೆ.
ದೇವಸ್ಥಾನದ ಬಳಿ ಚುನಾವಣಾ ಪ್ರಚಾರ ನಡೆಸುವ ವಿಚಾರವಾಗಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ಹೊಯ್ ಕೈ ಹಂತಕ್ಕೆ ತಲುಪಿದೆ ಎನ್ನಲಾಗಿದೆ.
ರಾಮ ನವಮಿ ಉತ್ಸವ ನಡೆಯುತ್ತಿದ್ದ ಮಂದಿರದ ಹೊರ ಭಾಗದಲ್ಲಿರುವ ಮುಖ್ಯ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದು, ಮಂದಿರದ ಬಳಿ ಪ್ರಚಾರ ನಡೆಸಬಾರದು ಎಂದು ಕೈ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವೇಳೆ ವಾಗ್ವಾದ ತಾರಕಕ್ಕೇರಿ ನೂಕು ನುಗ್ಗಲು ಹೊಯ್ ಕೈ ಹಂತಕ್ಕೆ ತಲುಪಿದೆ.
ಸ್ಥಳಕ್ಕೆ ಶಾಸಕ ವೇದಾವ್ಯಾಸ್ ಕಾಮತ್,ಮಿಥುನ್ ರೈ ಆಗಮಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಗುಂಪು ಚದುರಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ವರದಿಯಾಗಿದೆ.