ನೀವು ಅಡುಗೆಗೆ ಬಳಸುವ ಸ್ಪೈಸಿ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದಾ..!? ಎಂಬ ಪ್ರಶ್ನೆಗೆ ಇಲ್ಲ,.,ಹಾನಿಕಾರಕ ಎಂಬ ಉತ್ತರ ಅನೇಕರದ್ದು. ಆದರೂ ಕೆಲವು ಬ್ರಾಂಡ್ಗಳ ಮಸಾಲೆ ಪದಾರ್ಥಗಳ ಮೇಲೆ ನಮಗೆ ತುಂಬಾನೇ ಪ್ರೀತಿ. ಇದೀಗ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದ ಬೆನ್ನಲ್ಲೇ, ಭಾರತದ ಜನಪ್ರಿಯ ಎರಡು ರೆಡಿಮೇಡ್ ಮಸಾಲೆ ಕಂಪನಿಗಳ ಪ್ರಾಡೆಕ್ಟ್ಗಳು ವಿದೇಶದಲ್ಲಿ ಬ್ಯಾನ್ ಆಗಿದೆ.
ತನ್ನ ನಾಗರಿಕರ ಆರೋಗ್ಯ ಕಾಳಜಿಯನ್ನು ಗಂಭೀರವಾಗಿ ಪರಿಗಣಿಸಿರುವ ಹಾಂಗ್ ಕಾಂಗ್ ಸರ್ಕಾರ, ಎಂಡಿಹೆಚ್ ಮತ್ತು ಎವರೆಸ್ಟ್ಗಳ ಸ್ಪೈಸಿ ಪ್ರಾಡಕ್ಟ್ಗಳನ್ನು ಬ್ಯಾನ್ ಮಾಡಿದೆ. ಹಾಂಗ್ ಕಾಂಗ್ನ ಫುಡ್ ಸೇಫ್ಟಿ ವಾಚ್ಡಾಗ್ ಬ್ಯಾನ್ ಮಾಡಿ ಆದೇಶ ನೀಡಿದೆ.
ಎಂಡಿಹೆಚ್ ಪ್ರಾಡೆಕ್ಟ್ನ ಮೂರು ಪೌಡರ್ಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್ ಅಂಶಗಳು ಪತ್ತೆಯಾಗಿವೆ. ಮದ್ರಾಸ್ ಕರಿ ಪೌಡರ್, ಮಿಕ್ಸ್ಡ್ ಮಸಾಲಾ ಪೌಡರ್, ಸಾಂಬರ್ ಮಸಾಲದಲ್ಲಿ ಕ್ರಿಮಿನಾಶಕಕ್ಕೆ ಬಳಸುವ ಕೆಮಿಕಲ್ಸ್ ಪತ್ತೆಯಾಗಿದೆ. ಜೊತೆಗೆ ಎವರೆಸ್ಟ್ನ ಫಿಶ್ ಕರಿ ಮಸಾಲಾದಲ್ಲೂ Ethylene oxide ಅಂಶ ಪತ್ತೆಯಾಗಿದೆ ಎಂದು ಆಹಾರ ಸಂಸ್ಕರಣಾ ಕೇಂದ್ರ ಏಪ್ರಿಲ್ ಐದರಂದು ಘೋಷಣೆ ಮಾಡಿತ್ತು.
ಈ ಬಗ್ಗೆ ವೈಜ್ಞಾನಿಕ ಪ್ರಯೋಗಾಲಯದಲ್ಲಿ ದೃಢಪಟ್ಟ ಬೆನ್ನಲ್ಲೇ, ಹಾಂಗ್ ಕಾಂಗ್ ಆಹಾರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದೆ. ಹಾಂಗ್ ಕಾಂಗ್ನಲ್ಲಿ ಭಾರತದ ಎವರೆಸ್ಟ್ ಮತ್ತು ಎಂಡಿಹೆಚ್ ಪ್ರಾಡೆಕ್ಟ್ಗಳನ್ನು ನಿಷೇಧ ಮಾಡಿದೆ.

























