ಉಳ್ಳಾಲ : ಮಲಗಿದ್ದಲ್ಲೇ ಹೃದಯಾಘಾತವಾಗಿ ವಿವಾಹಿತ ಯುವಕ ಮೃತಪಟ್ಟ ಘಟನೆ ಉಳ್ಳಾಲ ಕೊಲ್ಯ ಕನೀರುತೋಟದಲ್ಲಿ ಸಂಭವಿಸಿದೆ.
ಕನೀರುತೋಟ ನಿವಾಸಿ ಜಿತೇಶ್ (28) ಮೃತ ಯುವಕ.
ಜಿತೇಶ್ ಅವರು ನಿನ್ನೆ ರಾತ್ರಿ ಊಟ ಮುಗಿಸಿ ಮಲಗಿದ್ದವರು ಇಂದು ಬೆಳಿಗ್ಗೆ ಏಳದ ಕಾರಣ, ಮನೆಮಂದಿ ಪರೀಕ್ಷಿಸಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಕೆಟಿಎಂ ಶೋರೂಂ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಿತೇಶ್, ಪಂಡಿತ್ ಹೌಸ್ ನಿವಾಸಿ ಯುವತಿಯನ್ನು ವಿವಾಹವಾಗಿದ್ದರು.
ಮೃತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

























