Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಉಪ್ಪಿನಂಗಡಿ :ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ಬಂಧನ..!!

    ಉಪ್ಪಿನಂಗಡಿ :ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ಬಂಧನ..!!

    ಗುಂಡ್ಯ: ಬಸ್ ಮತ್ತು ಕಾರು ನಡುವೆ ಡಿಕ್ಕಿ: ಮೂವರು ಮೃತ್ಯು..!!

    ಗುಂಡ್ಯ: ಬಸ್ ಮತ್ತು ಕಾರು ನಡುವೆ ಡಿಕ್ಕಿ: ಮೂವರು ಮೃತ್ಯು..!!

    ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಲಾರಿ..!!

    ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಲಾರಿ..!!

    ಸಂಟ್ಯಾರು : ಸರಣಿ ಅಪಘಾತ : ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿ..!!

    ಪುತ್ತೂರು: ಅಪ್ರಾಪ್ತ ಬಾಲಕ ಚಾಲನೆ ಮಾಡಿದ ಕಾರು ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ – ವಾಹನ ಮಾಲಕಿ ವಿರುದ್ಧ ಪ್ರಕರಣ..!!

    ಮಂಗಳೂರು: ಗ್ಯಾರೇಜ್‌ನಿಂದ ವಾಹನ ಬಿಡಿಭಾಗ ಕಳವು – ಲಾರಿ ಚಾಲಕ ಬಂಧನ..!!

    ಮಂಗಳೂರು: ಗ್ಯಾರೇಜ್‌ನಿಂದ ವಾಹನ ಬಿಡಿಭಾಗ ಕಳವು – ಲಾರಿ ಚಾಲಕ ಬಂಧನ..!!

    ಸಂಟ್ಯಾರು : ಸರಣಿ ಅಪಘಾತ : ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿ..!!

    ಸಂಟ್ಯಾರು : ಸರಣಿ ಅಪಘಾತ : ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಮಂಗಳೂರು

ಲೋಕಸಭಾ ಚುನಾವಣೆ : ದ.ಕ. ಜಿಲ್ಲೆ ಚುನಾವಣೆಗೆ ಸಂಪೂರ್ಣ ಸಜ್ಜು : 1,876 ಮತಗಟ್ಟೆಗಳು, 18,18,127 ಮತದಾರರು, 72 ಮಾದರಿ ಮತಗಟ್ಟೆಗಳು

April 24, 2024
in ಮಂಗಳೂರು, ರಾಜಕೀಯ
0
ಲೋಕಸಭಾ ಚುನಾವಣೆ : ದ.ಕ. ಜಿಲ್ಲೆ ಚುನಾವಣೆಗೆ ಸಂಪೂರ್ಣ ಸಜ್ಜು : 1,876 ಮತಗಟ್ಟೆಗಳು, 18,18,127 ಮತದಾರರು, 72 ಮಾದರಿ ಮತಗಟ್ಟೆಗಳು
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎ.26ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಲೋಕಸಭಾ ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತದಿಂದ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement
Advertisement
Advertisement

8,87,122 ಪುರುಷ ಮತ್ತು 9,30,928 ಮಹಿಳಾ ಮತದಾರರು ಸೇರಿ 18,18,127 ಮಂದಿ ಅರ್ಹ ಮತದಾರರು ಜಿಲ್ಲೆಯ 1876 ಮತಗಟ್ಟೆಗಳಲ್ಲಿ ಮತ ಚಲಾಯಿಸಲಿದ್ದಾರೆ ಎಂದು ದ.ಕ. ಜಿಲ್ಲಾ ಚುನಾವ ಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ.

Advertisement
Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1,876 ಮತಗಟ್ಟೆಗಳ ಪೈಕಿ ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ 72 ಮತ್ತು ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 105 ಸೂಕ್ಷ್ಮ ಮತಗಟ್ಟೆಗಳಿವೆ. ಚುನಾವಣೆ ಸಾಂಗವಾಗಿ ನೆರವೇರುವ ಉದ್ದೇಶದಿಂದ ಒಟ್ಟು 11,255 ಸಿಬಂದಿಯನ್ನು ನಿಯೋಜಿಸಲಾಗಿದೆ. ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಸಿಬಂದಿಯ ಪೈಕಿ ಶೇ. 70ರಷ್ಟು ಮಹಿಳೆಯರಿದ್ದಾರೆ. ಅವರನ್ನು ಸ್ವ ಕ್ಷೇತ್ರದ ಮತಗಟ್ಟೆಯಲ್ಲೇ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಒಂದು ಮತಗಟ್ಟೆಯಲ್ಲಿ ಕನಿಷ್ಠ ಇಬ್ಬರು ಮಹಿಳಾ ಸಿಬಂದಿ ಕರ್ತವ್ಯ ನಿರ್ವಹಿಸುತ್ತಾರೆ ಎಂದು ವಿವರಿಸಿದರು.

ಎ. 24ರಂದು ಸಂಜೆ 6 ಗಂಟೆಗೆ ಮುನ್ನ ಎಲ್ಲ ರಾಜಕೀಯ ಪಕ್ಷಗಳು ಬಹಿರಂಗ ಪ್ರಚಾರ ಅಂತ್ಯಗೊಳಿಸಬೇಕು. ಅನಂತರ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಕ್ಷೇತ್ರದಲ್ಲಿ ಇರುವಂತಿಲ್ಲ. ಮತದಾನದ ದಿನದಂದು ಮತದಾನ ಮಾಡಲು ಅನುಕೂಲವಾಗುಂತೆ ಸರಕಾರಿ ಮತ್ತು ಖಾಸಗಿ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ವೇತನ ಸಹಿತ ಕಡ್ಡಾಯ ರಜೆ ನೀಡಬೇಕು ಎಂದರು.

ಕರ್ತವ್ಯ ನಿರತ 1,052 ಸರಕಾರಿ ನೌಕರರು ಮತ ಚಲಾಯಿಸಿದ್ದಾರೆ. 85 ವರ್ಷ ಮೇಲ್ಪಟ್ಟ 5,878 ಮತ್ತು 1,929 ಮಂದಿ ಅಂಗವಿಕಲ ಮತದಾರರು ಮತ್ತು ಅಗತ್ಯ ಸೇವೆ ಎಂದು ಗುರುತಿಸಲಾದ ಇಲಾಖಾ ಅಧಿಕಾರಿಗಳ ಪೈಕಿ 100 ಮಂದಿ ಈಗಾಗಲೇ ಮತ ಚಲಾವಣೆ ಮಾಡಿದ್ದಾರೆ ಎಂದರು.

17,72,641 ಮಂದಿ ಮತದಾರರಿಗೆ ಓಟರ್ ಸ್ಲಿಪ್‌ ಹಂಚಿಕೆ ಮಾಡಲಾಗಿದೆ. ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಮತದಾರರಿಗೆ ಇದೇ ಮೊದಲ ಬಾರಿಗೆ ಓಟರ್‌ ಸ್ಲಿಪ್‌ನಲ್ಲಿ ಕ್ಯುಆರ್‌ ಕೋಡ್‌ ವ್ಯವಸ್ಥೆ ಮಾಡಲಾಗಿದ್ದು, ಸ್ಕ್ಯಾನ್ ಮಾಡುವ ಮೂಲಕ ಮತದಾನ ಕೇಂದ್ರದ ಮಾಹಿತಿ ಪಡೆಯಬಹುದಾಗಿದೆ ಎಂದರು.

ಮಾದರಿ ಮತಗಟ್ಟೆಗಳು

ಜಿಲ್ಲೆಯಲ್ಲಿ ಒಟ್ಟು 72 ಮತಗಟ್ಟೆ ಗಳನ್ನು ಮಾದರಿ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಇದರಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5ರಂತೆ ಸಖೀ ಬೂತ್‌, ಅಂಗವಿಕಲ, ಯುವ ಮತದಾರರ, ಧ್ಯೇಯ ಆಧಾರಿತ ಮತ್ತು ಸಾಂಪ್ರದಾಯಿಕ ತಲಾ 1 ಬೂತ್‌ ಇರಲಿದೆ. ಸಖೀ ಮತಗಟ್ಟೆಯಲ್ಲಿ ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಇರುವರು. 938 ಮತಗಟ್ಟೆಗಳಲ್ಲಿ ವೆಬ್‌ ಕಾಸ್ಟಿಂಗ್‌ ನಡೆಯಲಿದೆ ಎಂದರು.

ಮತಯಂತ್ರ- ವಿವಿಪ್ಯಾಟ್‌

ಚುನಾವಣಾ ಕಾರ್ಯಕ್ಕೆ ಉಪಯೋಗಿಸುವ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‌ಗಳನ್ನು ಸಿದ್ಧಪಡಿಸಲಾಗಿದೆ. ಒಟ್ಟು 2,334 ಬ್ಯಾಲೆಟ್‌ ಯುನಿಟ್‌ ಹೆಚ್ಚುವರಿಯಾಗಿ 458 ಮೀಸಲು ಇಟ್ಟು ಕೊಳ್ಳಲಾಗಿದೆ. 2,359 ಕಂಟ್ರೋಲ್‌ ಯುನಿಟ್‌ 483 ಹೆಚ್ಚುವರಿ, 2,484 ವಿವಿ ಪ್ಯಾಟ್‌ ಮತ್ತು 608 ಹೆಚ್ಚುವರಿ ಯಾಗಿ ಇಟ್ಟುಕೊಳ್ಳಲಾಗಿದೆ. ಹೆಚ್ಚುವರಿ ಯಂತ್ರಗಳು ಜಿಪಿಎಸ್‌ ಹೊಂದಿರುವ ವಾಹನಗಳಲ್ಲಿ ಸಿಎಪಿಎಫ್‌ ಸಿಬಂದಿ ಯೊಂದಿಗೆ ಸೆಕ್ಟರ್‌ ಅಧಿಕಾರಿಯ ಸುಪರ್ದಿಯಲ್ಲಿರಲಿದೆ ಎಂದು ವಿವರಿಸಿದರು.

ಮಸ್ಟರಿಂಗ್‌- ಡಿ ಮಸ್ಟರಿಂಗ್‌

ಬೆಳ್ತಂಗಡಿ-ಎಸ್‌ಡಿಎಂ ಪಪೂ ಕಾಲೇಜು ಉಜಿರೆ, ಮೂಡುಬಿದಿರೆ- ಮಹಾವೀರ ಪ್ರ.ದ. ಕಾಲೇಜು ಮೂಡುಬಿದಿರೆ, ಮಂಗಳೂರು ನಗರ ಉತ್ತರ- ಸಂತ ಅಲೋಶಿಯಸ್‌ ಪಪೂ ಕಾಲೇಜು ಕೊಡಿಯಾಲಬೈಲು, ಮಂಗಳೂರು ನಗರ ದಕ್ಷಿಣ – ಕೆನರಾ ಹೈಸ್ಕೂಲ್‌ ಉರ್ವ, ಲಾಲ್‌ಬಾಗ್‌, ಮಂಗಳೂರು-ಮಂಗಳೂರು ವಿವಿ ಹ್ಯಮಾನಿಟೀಸ್‌ ವಿಭಾಗ ಕೊಣಾಜೆ, ಬಂಟ್ವಾಳ- ಜೀಸಸ್‌ ಆಂಗ್ಲ- ಕನ್ನಡ ಮಾಧ್ಯಮ ಶಾಲೆ ಮೊಡಂಕಾಪು, ಪುತ್ತೂರು- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಸುಳ್ಯ-ನೆಹರೂ ಮೆಮೋರಿಯಲ್‌ ಕಾಲೇಜು ಸುಳ್ಯ.

ಭದ್ರತಾ ಕೊಠಡಿ, ಮತ ಎಣಿಕೆ ಕೇಂದ್ರ

ವಿಧಾನ ಸಭಾ ಕ್ಷೇತ್ರದಲ್ಲಿ ಡಿ-ಮಸ್ಟರಿಂಗ್‌ ಕಾರ್ಯ ಮುಕ್ತಾಯ ವಾದ ಬಳಿಕ ಕೇಂದ್ರಗಳಿಂದ ಇವಿಎಂ, ವಿವಿಪ್ಯಾಟ್‌ ಮತ್ತು ದಾಖಲೆಗಳನ್ನು ಮತ ಎಣಿಕೆ ಕೇಂದ್ರವಾದ ಎನ್‌ಐಟಿಕೆ ಸುರತ್ಕಲ್‌ನಲ್ಲಿರುವ ಭದ್ರತಾ ಕೊಠಡಿಯಲ್ಲಿ ಇರಿಸಲಾಗುತ್ತದೆ. ಜಿ.ಪಂ. ಸಿಇಒ ಡಾ. ಆನಂದ್‌, ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌, ದ.ಕ. ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್‌ ಕುಮಾರ್‌ ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಮುಕ್ತ ಮತ್ತು ನ್ಯಾಯೋಚಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಹಿನ್ನೆಲೆಯಲ್ಲಿ ಎ. 24ರಂದು ಸಂಜೆ 6ಗಂಟೆಯಿಂದ ಎ. 26ರಂದು ರಾತ್ರಿ 10 ಗಂಟೆಯ ವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.

Advertisement
Previous Post

ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 2023-24ನೇ ಸಾಲಿನ ಕಾರ್ಯ ಸಾಧನೆಯ ಬಗ್ಗೆ ಮಾಹಿತಿ : 690 ಕೋಟಿ ರೂ.ಗಳ ವ್ಯವಹಾರ, 2.97 ಕೋ. ರೂ. ನಿವ್ವಳ ಲಾಭ

Next Post

ದ.ಕ. ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ನೀಲನಕ್ಷೆ : ಒಂಬತ್ತು ಅಂಶಗಳ ‘ನವಯುಗ ನವಪಥ’ ಕಾರ್ಯಸೂಚಿ ಬಿಡುಗಡೆ

OtherNews

ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಲಾರಿ..!!
Featured

ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಲಾರಿ..!!

March 13, 2026
ಮಂಗಳೂರು: ಗ್ಯಾರೇಜ್‌ನಿಂದ ವಾಹನ ಬಿಡಿಭಾಗ ಕಳವು – ಲಾರಿ ಚಾಲಕ ಬಂಧನ..!!
ಕ್ರೈಮ್

ಮಂಗಳೂರು: ಗ್ಯಾರೇಜ್‌ನಿಂದ ವಾಹನ ಬಿಡಿಭಾಗ ಕಳವು – ಲಾರಿ ಚಾಲಕ ಬಂಧನ..!!

March 12, 2026
ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!
ಕ್ರೈಮ್

ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

March 11, 2026
ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!
ಕ್ರೈಮ್

ಉಲ್ಲಾಸ್ ನಗರದಲ್ಲಿ ಮನೆ ಕಳ್ಳತನ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಕಾವೂರು ಪೊಲೀಸರು..!!!

March 10, 2026
ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!
ಕ್ರೈಮ್

ಬೆಂಗಳೂರಿನಲ್ಲಿ ಎಸಿ ಅಳವಡಿಸುವ ವೇಳೆ ಕಟ್ಟಡದಿಂದ ಬಿದ್ದು ಯುವಕ ಸಾವು…!!

March 10, 2026
ಬಂಟ್ವಾಳ: ನೇತ್ರಾವತಿ ನದಿತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ..!
ಕ್ರೈಮ್

ಬಂಟ್ವಾಳ: ನೇತ್ರಾವತಿ ನದಿತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ..!

March 5, 2026

Leave a Reply Cancel reply

Your email address will not be published. Required fields are marked *

Recent News

ಉಪ್ಪಿನಂಗಡಿ :ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ಬಂಧನ..!!

ಉಪ್ಪಿನಂಗಡಿ :ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ಬಂಧನ..!!

March 13, 2026
ಗುಂಡ್ಯ: ಬಸ್ ಮತ್ತು ಕಾರು ನಡುವೆ ಡಿಕ್ಕಿ: ಮೂವರು ಮೃತ್ಯು..!!

ಗುಂಡ್ಯ: ಬಸ್ ಮತ್ತು ಕಾರು ನಡುವೆ ಡಿಕ್ಕಿ: ಮೂವರು ಮೃತ್ಯು..!!

March 13, 2026
ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಲಾರಿ..!!

ಚಾಲಕನ ನಿಯಂತ್ರಣ ತಪ್ಪಿ ಅಂಗಡಿಗೆ ನುಗ್ಗಿದ ಲಾರಿ..!!

March 13, 2026
ಸಂಟ್ಯಾರು : ಸರಣಿ ಅಪಘಾತ : ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿ..!!

ಪುತ್ತೂರು: ಅಪ್ರಾಪ್ತ ಬಾಲಕ ಚಾಲನೆ ಮಾಡಿದ ಕಾರು ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ – ವಾಹನ ಮಾಲಕಿ ವಿರುದ್ಧ ಪ್ರಕರಣ..!!

March 13, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page