ಪುತ್ತೂರು : ಲೋಕಸಭಾ ಚುನಾವಣೆಯ ಮತದಾನಕ್ಕೆ ಕೆಲವು ಗಂಟೆಗಳಷ್ಟೇ ಬಾಕಿಯಿದ್ದು, ಸಕಲ ತಯಾರಿಗಳು ನಡೆಸಲಾಗುತ್ತಿದೆ.
ಚುನಾವಣೆ ಬಗ್ಗೆ ಬಿಜೆಪಿ ಕಾರ್ಯಕರ್ತ ದಿ. ಪ್ರವೀಣ್ ಪೂಜಾರಿ ನೆಟ್ಟಾರು ಅವರು ತಾಯಿ ಮಾತನಾಡಿದ್ದು, ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.
‘ನನ್ನ ಮಗ ಪ್ರವೀಣ್ ನನ್ನು ಹಿಂದಿನಿಂದ ಬಂದು ಕೊಲೆ ಮಾಡಿ ಹೋದ್ರು.., ದಾರಿಯಲ್ಲಿ ಕೊಲೆ ಮಾಡಿ ಹೋಗ್ತಾರೆ ಅಂತವರನ್ನು ಕಾಂಗ್ರೆಸ್ ಸರಕಾರಕ್ಕೆ ಏನು ಮಾಡಲು ಆಗಲಿಲ್ಲ., ವೋಟ್ ಮಾಡುವಾಗ ನೋಡಿಕೊಂಡು ಮಾಡಿ ಕಾಂಗ್ರೆಸ್ ಸರಕಾರ ಬಂದ್ರೆ ದಾರಿಯಲ್ಲಿ ನಡೆಯಲು ಕೂಡ ಕಷ್ಟವಾಗುವಂತಹ ಸಂದರ್ಭ ಬರಬಹುದು.
ಪ್ರವೀಣ್ ಹತ್ಯೆ ವೇಳೆ ಬಂದು ಎಲ್ಲರು ಹೇಳಿದ್ರು ನಾವಿದ್ದೇವೆ ಅಂತ ಆದ್ರೆ ಈಗ ಯಾರು ಇಲ್ಲ.., ಮನೆ ಬಾಗಿಲಿಗೆ ಈಗ ಬರುವುದು ಬಿಜೆಪಿಯವ್ರು ಮಾತ್ರ.
ನನ್ನ ಮಗನನ್ನು ಕೊಲೆ ಮಾಡಿರುವ ಎಸ್.ಡಿ.ಪಿ.ಐ, ಪಿ.ಎಫ್.ಐ ನವ್ರು ಕಾಂಗ್ರೆಸ್ ಜೊತೆ ಸೇರಿದ್ದಾರೆ. ಕಾಂಗ್ರೆಸ್ ಗೆ ಮತ ನೀಡಿ ಅವರೇನಾದ್ರು ಜಯಗಳಿಸಿದ್ರೆ ಜೈಲಿನಲ್ಲಿರುವವರು ಬಿಡುಗಡೆ ಆಗ್ಬಹುದು. ಮತ್ತೆ ಬಂದು ಎಲ್ಲರಿಗೂ ತೊಂದರೆ ನೀಡ್ಬಹುದು. ಎಲ್ಲರ ಹಿತ ನೋಡಿಕೊಂಡು ಮತದಾನ ಮಾಡಿ ಎನ್ನುವಂತಹ ವೀಡಿಯೋ ವೈರಲ್ ಆಗುತ್ತಿದೆ..


























