ಸಾಮಾನ್ಯವಾಗಿ ಪಾನ್ ಬೀಡಾ ಮಾರಿ ಕುಟುಂಬವನ್ನು ನಿರ್ವಹಿಸುವವರನ್ನು ಕಂಡಾಗ ಅಯ್ಯೋ ಪಾಪ ಜೀವನ ಎಷ್ಟು ಕಷ್ಟ ಅಂತ ಒಂದು ಕ್ಷಣ ಅನಿಸುವುದು ಸಹಜ. ಆದರೆ ಇಲ್ಲೊಬ್ಬ ಪಾನ್ ಅಂಗಡಿ ನಡೆಸುವ ವ್ಯಕ್ತಿಯನ್ನು ಕಂಡಾಗ ಶಿಕ್ಷಣ ಎಲ್ಲ ವೇಸ್ಟ್, ಒಂದು ಚಿಕ್ಕ ಪಾನ್ ಅಂಗಡಿ ನಡೆಸುವ ಅಂತಾ ನಿಮಗಿಸಬಹುದು. ಹೌದು ಅಷ್ಟು ಐಷಾರಾಮಿ ಜೀವನ ನಡೆಸುತ್ತಾರೆ ಈ ಪಾನ್ವಾಲಾ. ಪುಟ್ಟ ಪಾನ್ ಅಂಗಡಿ ನಡೆಸುವ ಈ ವ್ಯಕ್ತಿಯ ಮೈಮೇಲಿದೆ 2 ಕೋಟಿಗೂ ಅಧಿಕ ಬೆಲೆ ಬಾಳುವ ಆಭರಣಗಳು.
ಪಾನ್ ಮಾರಾಟಗಾರರ ಕುಟುಂಬದಲ್ಲಿ ಜನಿಸಿದ ಫೂಲಚಂದ್ ಹಲವು ವರ್ಷಗಳಿಂದ ಈ ಅಂಗಡಿಯನ್ನು ನಡೆಸುತ್ತಿದ್ದಾರೆ. ಇದಕ್ಕಿಂತ ಮೊದಲು ಇವರ ತಂದೆ ಈ ಅಂಗಡಿಯನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಸರ, ಉಂಗುರ ಹಾಗೂ ಕಿವಿಯೋಲೆ ಸೇರಿದಂತೆ ಸುಮಾರು 2 ಕೆಜಿ ತೂಕದ ಆಭರಣವನ್ನು ಧರಿಸಿ ಪಾಲ್ ಮಾರಾಟ ಮಾಡುತ್ತಾರೆ ಫೂಲಚಂದ್.
ಪಾನ್ ಅಂಗಡಿ ನಡೆಸುವ ವ್ಯಕ್ತಿಯೂ ಕೂಡ ಐಷಾರಾಮಿ ಜೀವನ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಹಂಚಿಕೊಳ್ಳಲಾಗಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಏಪ್ರಿಲ್ 18ರಂದು ಹಂಚಿಕೊಂಡಿರುವ ವೀಡಿಯೋ ಇಲ್ಲಿಯವರೆಗೆ 20 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.


























