ಮಹಿಳೆಯೊಬ್ಬಳು ತನ್ನ ಭಾವನಿಂದ ಅತ್ಯಾಚಾರಕ್ಕೊಳಗಾಗಿದ್ದು, ಈ ವಿಚಾರವನ್ನು ಗಂಡನ ಬಳಿ ತಿಳಿಸುತ್ತಿದ್ದಂತೆಯೇ ಆತ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಮುಜಾಫರ್ ನಗರದ ಮಹಿಳೆ ತನ್ನ ಗಂಡನ ಸಹೋದರನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ.
ಏಪ್ರಿಲ್ 2 ರಂದು ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಭಾವ ತನ್ನ ಮೇಲೆ ಅತ್ಯಾಚಾರವೆಸಗಿದ್ದನು ಮಹಿಳೆ ತನ್ನ ಗಂಡ ಬಳಿ ಹೇಳಿಕೊಂಡಿದ್ದಾಳೆ. ಆದರೆ ಈ ವಿಚಾರ ತಿಳಿದ ಬಳಿಕ ಆಕೆಯ ಗಂಡ ‘ನೀನು ನನ್ನ ಹೆಂಡತಿಯಲ್ಲ ಅತ್ತಿಗೆ’ ಎಂದು ಹೇಳಿದ್ದಾನೆ.
ಮರುದಿನ ಗಂಡ ಆಕೆಯನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಸಿದ್ದಾನೆ. ಈ ಸಮಯದಲ್ಲಿ ಅತ್ಯಾಚಾರವೆಸಗಿದ ಭಾವ ತನ್ನ ಮೊಬೈಲ್ನಲ್ಲಿ ಘಟನೆಯನ್ನ ರೆಕಾರ್ಡ್ ಮಾಡಿದ್ದಾನೆ.
ಮಹಿಳೆ ತನಗಾದ ಅನ್ಯಾಯವನ್ನು ವೀಡಿಯೋ ಮತ್ತು ಲಿಖಿತ ದೂರಿನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಇದನ್ನು ತಿಳಿದು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಐಪಿಸಿ ಸೆಕ್ಷನ್ 376, 307, 328 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

























