ಪುತ್ತೂರು : ಕೆದಂಬಾಡಿ ಗ್ರಾಮದ ಕೆರೆಮೂಲೆ ದಿ. ಸಂಕಪ್ಪ ಪೂಜಾರಿಯವರ ಪುತ್ರ ದಿವಾಕರ (38) ಏ.27ರಿಂದ ನಾಪತ್ತೆಯಾದ ಬಗ್ಗೆ ವರದಿಯಾಗಿದೆ.

ಅಡುಗೆ ಕೆಲಸಕ್ಕೆ ಸಹಾಯಕರಾಗಿ ಹೋಗುತ್ತಿದ್ದ ದಿವಾಕರ ಅವರು ಏ.27 ರಂದು ಮನೆಯಿಂದ ಹೊರಗೆ ಹೋದವರು ತಿರುಗಿ ಬಾರದೆ ನಾಪತ್ತೆಯಾಗಿದ್ದಾರೆ.
ದಿವಾಕರ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಎಂದು ಅವರ ಚಿಕ್ಕಪ್ಪ ಸೀತಾರಾಮ ಪೂಜಾರಿಯವರು ಪುತ್ತೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

























