ಪುತ್ತೂರು : ವ್ಯಕ್ತಿಯೋರ್ವರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನೂರು ನಿವಾಸಿ ಸೀತಾರಾಮ ರೈ (55) ಮೃತರು.

ಈ ಬಗ್ಗೆ ಸೀತಾರಾಮ ರೈ ಅವರ ಪತ್ನಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಸೀತಾರಾಮ ರೈ ಪುತ್ತೂರಿನಲ್ಲಿ ಗ್ಯಾಸ್ ಡೆಲಿವರಿ ಕೆಲಸ ಮಾಡಿಕೊಂಡಿದ್ದು, ಮದ್ಯಪಾನ ಸೇವನೆ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಏ.28 ರಂದು ಸಂಜೆ ಮನೆಯಿಂದ ಪೇಟೆಗೆಂದು ಹೋದವರು ರಾತ್ರಿ ವಿಪರೀತ ಮದ್ಯ ಸೇವನೆ ಮಾಡಿ ಮನೆಗೆ ಬಂದಿದ್ದು, ಮನೆಗೆ ಬಂದವರು ಮಗನೊಂದಿಗೆ ಗಲಾಟೆ ಮಾಡಿ ಬಳಿಕ ಕೋಣೆಗೆ ಮಲಗಲು ಹೋಗಿರುತ್ತಾರೆ.
ಕೆಲ ಹೊತ್ತಿನ ಬಳಿಕ ಪತ್ನಿಯ ತಾಯಿ ಕೊಠಡಿಯ ಲೈಟ್ ಆಫ್ ಮಾಡಲು ಹೋದಾಗ, ಸೀತಾರಾಮ ಅವರು ಕೊಠಡಿಯಲ್ಲಿ ನೇಣು ಬಿಗಿದುಕೊಂಡಿರುವುದು ಕಂಡುಬಂದಿದ್ದು, ಪತ್ನಿ ಹಾಗೂ ಮಕ್ಕಳು ಚಿಕಿತ್ಸೆಗಾಗಿ, ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆತಂದಾಗ, ವೈದ್ಯರು ಪರೀಕ್ಷಿಸಿ ನೋಡಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ:174 ಸಿ ಆರ್ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























