ಮಂಗಳೂರು : ಮಾನಸಿಕ ಖಿನ್ನತೆಯಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಮಂಜೇಶ್ವರ ಬಂದ್ಯೋಡು ನಿವಾಸಿ ಮೊಹಮ್ಮದ್ ನೌಫಾಲ್ (24) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆಸ್ಪತ್ರೆಯ ಕೊಠಡಿಯಲ್ಲಿ ಕಿಟಕಿಯ ರಾಡ್ ಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ನೌಫಾಲ್ 2022ರ ಡಿಸೆಂಬರ್ ನಲ್ಲಿ ಮಾದಕ ದ್ರವ್ಯ ಕೇಸ್‌ನಲ್ಲಿ ಬಂಧಿಸಲ್ಪಟ್ಟು ಜೇಲಿನಲ್ಲಿದ್ದ. ಖಿನ್ನತೆಯಿಂದ ಆಸ್ಪತ್ರೆಗೆ ಎ.25 ರಂದು ದಾಖಲಾಗಿದ್ದ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


























