ಪುತ್ತೂರಿನಿಂದ ವಿಟ್ಲಕ್ಕೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಕಳೆದ ನಾಲ್ಕು ತಿಂಗಳಿಂದ ಸಂಚಾರವನ್ನು ರದ್ದು ಮಾಡಲಾಗಿದ್ದು, ಬಸ್ ವ್ಯವಸ್ಥೆ ಪುನರಾರಂಭ ಮಾಡಬೇಕೆಂದು ಶಾಸಕರಿಗೆ ವಿಟ್ಲ ಭಾಗದ ವಕೀಲರು ಮನವಿ ಮಾಡಿದ್ದಾರೆ.

ಸಂಜೆ 7 ಮತ್ತು ಬೆಳಿಗ್ಗೆ ಬಿ.ಸಿ.ರೋಡ್ ನಿಂದ ವಿಟ್ಲ ಮಾರ್ಗವಾಗಿ ಪುತ್ತೂರಿಗೆ ಬರುತ್ತಿದ್ದ ಬಸ್ಸು ಕಳೆದ ನಾಲ್ಕು ತಿಂಗಳಿಂದ ಸಂಚಾರ ನಿಲ್ಲಿಸಲಾಗಿದೆ ಎಂದು ಶಾಸಕರಿಗೆ ತಿಳಿಸಿದರು. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಬಳಿ ಮಾಹಿತಿ ಪಡೆದ ಶಾಸಕರು ಎರಡು ದಿನದೊಳಗೆ ವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಕೀಲರಾದ ಅಶೋಕ್ ಸಿ.ಎಚ್, ಸುಪ್ರಿತಾ, ಚಂದ್ರಹಾಸ, ಸಂತೋಷ್ ಕೆ.ಆರ್ ಉಪಸ್ಥಿತರಿದ್ದರು.


























