ಗಾಂಧಿನಗರ : ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಮಂದಿ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮೇಲೆ ಡಿಪೆಂಡ್ ಆಗಿದ್ದಾರೆ. ಬೆಳ್ಳಗೆ, ಮಧ್ಯಾಹ್ನ ಅಷ್ಟೇ ಯಾಕೆ ರಾತ್ರಿ ಕೂಡ ಆನ್ಲೈನ್ನಲ್ಲಿಯೇ ಫುಡ್ ಆರ್ಡರ್ ಮಾಡಿ ತಮ್ಮ ಇಡಿ ದಿನವನ್ನು ಕಳೆಯುತ್ತಾರೆ. ಆದರೆ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡಿದ ಈ ಯುವತಿಗೆ ಬಿಗ್ ಶಾಕ್ವೊಂದು ಕಾದಿತ್ತು.
ಅಹಮದಾಬಾದ್ನ ಸೋಲಾ ಪ್ರದೇಶದ ಚಾಮುಂಡನಗರದ ನೆರೆಹೊರೆಯಲ್ಲಿ ವಾಸವಾಗಿದ್ದ ಯುವತಿ ನಿರಾಲಿ ಆನ್ಲೈನ್ನಲ್ಲಿ ಫುಡ್ ಡೆಲಿವರಿ ಆ್ಯಪ್ ಮೂಲಕ ರೆಸ್ಟೋರೆಂಟ್ನಿಂದ ಪನೀರ್ ಟಿಕ್ಕಾ ಸ್ಯಾಂಡ್ವಿಚ್ ಅನ್ನು ಆರ್ಡರ್ ಮಾಡಿದ್ದಾರೆ. ಆದರೆ ಪನೀರ್ ಟಿಕ್ಕಾ ಸ್ಯಾಂಡ್ವಿಚ್ ಬದಲಿಗೆ ಚಿಕನ್ ಟಿಕ್ಕಾ ಸ್ಯಾಂಡ್ವಿಚ್ ಬಂದಿದೆ. ಇದನ್ನು ಗಮನಿಸದೆ ಯುವತಿ ಸ್ಯಾಂಡ್ ವಿಚ್ ತಿಂದಾಗ ಪನೀರ್ ಟಿಕ್ಕಾ ಬದಲು ಚಿಕನ್ ಟಿಕ್ಕಾ ಸ್ಯಾಂಡ್ವಿಚ್ ಇರುವುದು ಬೆಳಕಿಗೆ ಬಂದಿದೆ.
ಯುವತಿಯೂ ನಾನು ಆರ್ಡರ್ ಮಾಡಿದ್ದು ಪನೀರ್ ಟಿಕ್ಕಾ ಸ್ಯಾಂಡ್ವಿಚ್. ಆದರೆ ನನಗೆ ಬಂದಿದ್ದ ಚಿಕನ್ ಟಿಕ್ಕಾ ಸ್ಯಾಂಡ್ವಿಚ್ ಎಂದು ಯುವತಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ನ ಆರೋಗ್ಯ ಇಲಾಖೆಗೆ ದೂರು ನೀಡಿದ್ದಾಳೆ. ಇದಾದ ಬಳಿಕ ವೆಜ್-ಸ್ಯಾಂಡ್ವಿಚ್ ಬದಲಿಗೆ ನಾನ್ ವೆಜ್ ಸ್ಯಾಂಡ್ವಿಚ್ ಪಡೆದ ನಂತರ ಪರಿಹಾರವಾಗಿ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿದ್ದಾಳೆ.
ಈ ಬಗ್ಗೆ ಮಾತಾಡಿದ ಯುವತಿ ಮೊದ, ಮೊದಲು ನಾನು ಗಮನಿಸದೇ ಸ್ಯಾಂಡ್ವಿಚ್ ತಿಂದೆ. ಆದರೆ ಎರಡು ಬೈಟ್ ತಿಂದ ಬಳಿಕ ಇದು ಏಕೆ ಇಷ್ಟು ಗಟ್ಟಿಯಾಗಿದೆ ಅಂತ ಅನುಮಾನದಲ್ಲಿ ನಾನು ಮತ್ತೆ ಪರಿಶೀಲನೆ ನಡೆಸಿದೆ. ಆ ಬಳಿಕ ನನಗೆ ಗೊತ್ತಾಯಿತು ಚಿಕನ್ ಸ್ಯಾಂಡ್ವಿಚ್ ಎಂದು. ನಾನು ನನ್ನ ಜೀವನದಲ್ಲೇ ನಾನ್ ವೆಜ್ ತಿಂದಿಲ್ಲ. ಇದೇ ಮೊದಲ ಬಾರಿಗೆ ಚಿಕನ್ ಇಂದು ನನಗೆ ಬೇಸರ ಆಯ್ತು. ಹೀಗಾಗಿ ನಾನು ಆರೋಗ್ಯ ಇಲಾಖೆಗೆ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಜೊತೆಗೆ 50 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದ್ದೇನೆ ಅಂತಾ ಹೇಳಿಕೊಂಡಿದ್ದಾಳೆ.


























