ಕುದ್ಮಾರು ಗ್ರಾಮದ ನೂಜಿಯಲ್ಲಿ ಅಕ್ರಮ ಮರಳುಗಾರಿಕೆ ವಿಚಾರವಾಗಿ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು ಆದರೆ ಈ ವಿಚಾರಕ್ಕೆ ಸಂಭಂದಿಸಿ ದ.ಕ ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘ ಸ್ಪಷ್ಟನೆ ನೀಡಿದೆ.
ಕುದ್ಮಾರಿನಲ್ಲಿ ಸ್ಥಳೀಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬೇಕಾದ ಮರಳನ್ನು ಸಂಗ್ರಹ ಮಾಡಿದ್ದು ಇಲಾಖೆಯ ಮೂಲಕ ಸರಕಾರಕ್ಕೆ ರಾಜಧನ ಪಾವತಿಸಿಯೇ ಮರಳು ಸಂಗ್ರಹಿಸಲಾಗಿದೆ ಎಂದು ಹೇಳಿದೆ.
ಈ ಪ್ರಕರಣಕ್ಕೆ ರಾಜಕೀಯ ವ್ಯಕ್ತಿಗಳ ಕೈವಾಡವಿದ್ದು ಹಲವು ರಾಜಕೀಯ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಅಲ್ಲದೆ ರಾಜಕೀಯ ಒತ್ತಡಕ್ಕೆ ಮಣಿದು ದಿನೇಶ್ ಮೆದು ಅವರ ಮೇಲೆ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಲಾಗಿದೆ ದಿನೇಶ್ ಮೆದು ಅವರು ಸಂಘದ ಅಧ್ಯಕ್ಷರಾಗಿ ಹಲವು ರೀತಿಯ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ದ.ಕ ಜಿಲ್ಲಾ ಮರಳು ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಳ್ಳಿಪ್ಪಾಡಿ, ಉಪಾಧ್ಯಕ್ಷ ಚರಣ್ , ಕೋಶಾಧಿಕಾರಿ ಸುರೇಶ್ ತಿಳಿಸಿದ್ದಾರೆ.


























