ಪುತ್ತೂರು : ಬಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ಶಾಲೆಯ ಮೇಲೆ ಬಿದ್ದು ಶಾಲೆಯ ಕಟ್ಟಡಕ್ಕೆ ಹಾನಿಯಾದ ಘಟನೆ ನಡೆದಿದೆ.
ಪುತ್ತೂರಿನ ಮಂಜಲ್ಪಡುಪಿನಲ್ಲಿರುವ ಬಿ.ಇ.ಯಂ. ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಗಾಳಿ ಮಳೆಯ ಕಾರಣ ಬೃಹತ್ ಗಾತ್ರದ ಮರ ಬಿದ್ದು ಶಾಲೆಯ ಕಟ್ಟಡಕ್ಕೆ ಹಾನಿಯಾಗಿದೆ.

ರಜೆ ಇದ್ದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಶಿವನಂದಪ್ಪರವರು ತಿಳಿಸಿದ್ದಾರೆ.




























