ವೇಗವಾಗಿ ಕಾರು ಚಲಾಯಿಸುವುದನ್ನು ಇನ್ಸ್ಟಾಗ್ರಾಂನಲ್ಲಿ ಲೈವ್ ಮಾಡಲು ಹೋಗಿ ಕೊನೆಗೆ ಸಾವನ್ನಪ್ಪಿದ ಘಟನೆ ಗುಜರಾತ್ನ ವಸಾದ್ನ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಸ್ನೇಹಿತರು ಸೇರಿ ಹೈವೇನಲ್ಲಿ ವೇಗವಾಗಿ ಕಾರು ಚಲಾಯಿಸಿದ್ದಾರೆ. ಸುಮಾರು 140 ಕಿ.ಮೀ ವೇಗದಲ್ಲಿ ಕಾರು ಓಡಿಸಿದ್ದಾರೆ. ಕಾರಿನಲ್ಲಿ ಹಾಡು ಕೇಳುತ್ತಾ ಎಂಜಾಯ್ ಮಾಡುತ್ತಾ ಜೊತೆಗೆ ಎಂಜಾಯ್ ಮಾಡುವ ದೃಶ್ಯವನ್ನು ಮತ್ತೋರ್ವ ಇನ್ಸ್ಟಾದಲ್ಲಿ ಲೈವ್ ಮಾಡಿದ್ದಾರೆ. ಆದರೆ ಅತಿಯಾದ ವೇಗ ಅಪಘಾತಕ್ಕೆ ಕಾರಣ ಎಂಬಂತೆ ವೇಗದ ಕಾರು ಚಾಲನೆಯಿಂದ ಪಲ್ಟಿ ಹೊಡೆದಿದೆ. ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ.
Insta live ವಿಡಿಯೋ
https://x.com/Prateek34381357/status/1790395260302234095
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಯುವಕರು ವೇಗವಾಗಿ ಕಾರು ಚಲಾಯಿಸುವ ಇನ್ಸ್ಟಾಗ್ರಾಂ ಲೈವ್ ದೃಶ್ಯ ವೈರಲ್ ಆಗಿದೆ. ದೃಶ್ಯದಲ್ಲಿ ಯುವಕರು ಎಂಜಾಯ್ ಮಾಡುವುದನ್ನು ಕಾಣಬಹುದಾಗಿದೆ. ಜೊತೆಗೆ ಕಾರಿನ ಮೀಟರ್ 140 ಕಿಮೀನಲ್ಲಿ ಇರುವುದು ಕಾಣಬಹುದಾಗಿದೆ.



























