Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ ..!!

    ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ ..!!

    ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

    ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

    ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ..!!

    ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ..!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಅಪ್ರಾಪ್ತನಿಗೆ ಹಲ್ಲೆ ಪ್ರಕರಣ ದಾಖಲು..!!

    ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

    ಪಟ್ಲ ಖ್ಯಾತ ನಾಟಿ ವೈದ್ಯ ಅಣ್ಣು ಪೂಜಾರಿ ವಿಧಿವಶ..!!

    ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

    ರಮಾನಾಥ್ ರೈ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧಿಸ್ತಾರೆ: ಅವರನ್ನು ಗೆಲ್ಲಿಸೋ ಕೆಲ್ಸ ಮಾಡ್ಬೇಕು – ಸಿಎಂ ಸಿದ್ದರಾಮಯ್ಯ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬೆಂಗಳೂರು

ಹೆಂಡತಿಗೆ ಹೆದರಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಪತಿರಾಯ : ಆಗಿದ್ದೇನು?

May 17, 2024
in ಬೆಂಗಳೂರು, ರಾಜ್ಯ
0
ಹೆಂಡತಿಗೆ ಹೆದರಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಪತಿರಾಯ : ಆಗಿದ್ದೇನು?
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

Advertisement
Advertisement
Advertisement

ಬೆಂಗಳೂರು : ಕೆಲವೊಂದು ಸಾರಿ ನಾವು ಅಂದುಕೊಳ್ಳೋದೇ ಒಂದು. ಆದ್ರೆ ಆಗೋದೇ ಇನ್ನೊಂದು. ಇಲ್ಲಾಗಿದ್ದು ಅದೇ. ಹೆಂಡತಿಯನ್ನ ಬೆದರಿಸಬೇಕು ಅಂತ ಅಂದುಕೊಂಡವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದ. ಆದ್ರೆ ಆ ಹುಚ್ಚು ಸಾಹಸ ಅವನ ಜೀವಕ್ಕೆ ಮುಳುವಾಗಿಬಿಟ್ಟಿದೆ.

Advertisement
Advertisement

ಅಮಿತ್ ದೂರದ ಬಿಹಾರದಿಂದ ಹೊಟ್ಟೆಪಾಡಿಗಾಗಿ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದು ಜಿಮ್ ಟ್ರೈನರ್ ಆಗಿ ಕೆಲಸ ಮಾಡ್ತಿದ್ದ. ಬೆಂಗಳೂರಲ್ಲಿ ಕೆಲಸ ಮಾಡ್ಕೊಂಡು ಆರಾಮಾಗಿಯೇ ಇದ್ದ. ಆದ್ರೆ ಅದ್ಯವಾಗ ಪ್ರೀತಿ ಅನ್ನೋ ಮಾಯೆಗೆ ಸಿಲುಕಿದ್ನೋ ಅಲ್ಲಿಂದಲೇ ಇವನ ಜೀವನ ನರಕವಾಗಿಬಿಟ್ಟಿದೆ. ಯಾಕಂದ್ರೆ ಕಳೆದ ಒಂದು ವರ್ಷದ ಹಿಂದೆ ಈ ಅಮಿತ್ ತಾನು ಕೆಲಸ ಮಾಡ್ತಿದ್ದ ಸ್ಥಳದಲ್ಲೇ ಹಾಸನದ ಯುವತಿಯೊಬ್ಬಳನ್ನ ಇಷ್ಟ ಪಟ್ಟಿದ್ದ. ಅವಳು ಕೂಡ ಇವನನ್ನ ಇಷ್ಟ ಪಟ್ಟಿದ್ಳು. ಅದ್ರಂತೆ ಇಬ್ಬರು ಮದುವೆ ಕೂಡ ಆಗಿದ್ರು. ಎಲ್ಲ ಚೆನ್ನಾಗಿತ್ತು ಅನ್ನೋಷ್ಟರಲ್ಲಿ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಇಷ್ಟ ಪಟ್ಟು ಆದ ಇದೇ ಮದುವೆ ಇವನ ಜೀವಕ್ಕೆ ಕುತ್ತು ತಂದು ಬಿಟ್ಟಿದೆ.

ಜಿಮ್​ ಟ್ರೈನರ್ ಆಗಿ ಕೆಲಸ ಮಾಡ್ತಿದ್ದ ಅಮಿತ್ ಕಳೆದ ವರ್ಷ ಹುಡುಗಿಯೊಬ್ಬಳನ್ನ ಇಷ್ಟ ಪಟ್ಟಿದ್ದ. ಹಾಸನದ ಮೂಲದವಳಾಗಿದ್ದ ಯವತಿಯನ್ನ ಅಮಿತ್ ಪ್ರೀತಿ ಮಾಡ್ತಿದ್ದ. ಬಿಹಾರದ ಹುಡುಗ ಹಾಸನದ ಹುಡುಗಿ ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆದು ಕೊನೆಗೆ ಅದು ಮದುವೆ ಹಂತಕ್ಕೂ ಬಂದಿತ್ತು. ಆದ್ರೆ ಈ ಪ್ರೀತಿ ಅಮಿತ್ ಮನೆಯವರಿಗೆ ಇಷ್ಟ ಇರಲಿಲ್ಲ. ಹಾಗಂತ ಅಮಿತ್​ ಪ್ರೀತಿಸಿದವಳನ್ನ ಬಿಟ್ಟಿರಲಿಲ್ಲ ಪೋಷಕರ ವಿರೋಧದ ನಡುವೆ ಹಾಸನದ ಯುವತಿಯನ್ನ ಮದುವೆಯಾಗಿದ್ದ. ಆದ್ರೆ ಮದುವೆಯಾದ ಒಂದೇ ವರ್ಷಕ್ಕೆ ಇವರ ಸಂಸಾರದಲ್ಲಿ ಮನಸ್ತಾಪಗಳು ಶುರುವಾಗಿವೆ.

ಪ್ರೀತಿಸಿ ಮದುವೆಯಾಗಿದ್ದ ಅಮಿತ್​ ಸಮಾಜದಲ್ಲಿ ಹೆಂಡತಿ ಒಂದೊಳ್ಳೆ ಸ್ಥಾನ ಸಿಗಲಿ ಅನ್ನೋ ಆಸೆ ಪಟ್ಟಿದ್ದ. ಇದೇ ಕಾರಣಕ್ಕೆ ಮದುವೆಯಾದ್ಮೇಲೆ ಅಮಿತ್ ಹೆಂಡತಿ ನರ್ಸಿಂಗ್ ಕೋರ್ಸ್ ಸೇರಿದ್ಳು. ಹಾಗಂತ ಅಮಿತ್ ಅದಕ್ಕೆ ವಿರೋಧ ಏನು ಮಾಡಿರಲಿಲ್ಲ. ಆದ್ರೆ ಕೋರ್ಸ್ ಸೇರಿದ ಬಳಿಕ ಅಮಿತ್ ಹೆಂಡತಿಯ ವರಸೆ ಬದಲಾಗಿದೆಯಂತೆ. ನರ್ಸಿಂಗ್ ಕೋರ್ಸ್ ಸೇರಿದ್ಮೇಲೆ ಅಮಿತ್ ಹೆಂಡತಿ ಫೋನ್​ನಲ್ಲಿ ಬ್ಯುಸಿಯಾಗಿ ದಿನಪೂರ್ತಿ ಫೋನ್​ನಲ್ಲಿ ಮಾತಾಡ್ತಾನೆ ಇದ್ದಳಂತೆ. ಆದ್ರೆ ಇದು ಅಮಿತ್​ಗೆ ಸಹಿಸಿಕೊಳ್ಳಲು ಆಗ್ತಿರಲಿಲ್ಲ. ಯಾರು? ಏನು ? ಅಂತ ಕೇಳ್ದಾಗ ಅಮಿತ್ ಹೆಂಡತಿ ಫ್ರೆಂಡ್ಸ್​ ಅಂತ ಹೇಳಿದ್ದಾಳೆ. ಆದ್ರೆ ಇದು ಇಷ್ಟಕ್ಕೆ ನಿಂತಿಲ್ಲ. ಪ್ರತಿದಿನ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಪ್ರತಿ ದಿನ ಕೂಗಾಡೋದು, ವಾಗ್ವಾದಗಳು ನಡೀತಾನೇ ಇದ್ವಂತೆ. ಫೋನ್​ನಲ್ಲಿ ಬ್ಯುಸಿಯಾಗಿದ್ದ ಅಮಿತ್ ಹೆಂಡತಿ ವರಸೆ ಬದಲಾಗಿತ್ತಂತೆ. ಗಂಡನ ಪ್ರಶ್ನೆಗೆ ಹಾರಿಕೆ ಉತ್ತರ ನೀಡ್ತಿದ್ಲಂತೆ.

ಪ್ರತಿದಿನ ಇಬ್ಬರ ಮಧ್ಯೆ ಜಗಳ ನಡೀತಾನೇ ಇತ್ತಂತೆ. ಅದ್ಯಾವಗ ಗಂಡ ಹೆಂಡತಿ ನಡುವಿನ ಜಗಳ ವಿಕೋಪಕ್ಕೆ ಹೋಯ್ತು. ಕೊನೆಗೆ ಅಮಿತ್ ಪತ್ನಿ ಮನೆ ಬಿಟ್ಟು ಹೋಗಿ. ಗಂಡನಿಂದ ದೂರವಾಗಿ ಬೇರೆ ಕಡೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಳಂತೆ. ಆದ್ರೆ ಹೆಂಡತಿ ಮನೆ ಬಿಟ್ಟು ಹೋದ್ಳು ಅಂತ ಅಮಿತ್ ಮಾನಸಿಕವಾಗಿ ಕುಗ್ಗಿ ಹೋಗಿದ್ನಂತೆ. ಇದೇ ಕಾರಣಕ್ಕೆ ಬುಧವಾರ ಪತ್ನಿಗೆ ಮನೆಗೆ ಬರುವಂತೆ ಕಾಲ್ ಮಾಡಿದ್ದಾನೆ. ಆದ್ರೆ ಹೆಂಡತಿ ಆಗಲ್ಲ ಅಂದಿದ್ದಾಳೆ. ಆಗ ಅಮಿತ್ ಆಗದೇ ಇರೋ ದುಸ್ಸಾಹಸಕ್ಕೆ ಕೈ ಹಾಕಿದ್ದ. ಮಾಡಬಾರದ ಕೆಲಸ ಮಾಡಲು ಹೋಗಿ ಎಡವಟ್ಟು ಮಾಡ್ಕೊಂಡಬಿಟ್ಟಿದ್ದ. ಆದ್ರೀಗ ಅದೇ ಎಡವಟ್ಟಿನಿಂದ ಜಿಮ್ ಟ್ರೈನರ್ ಜೀವವನ್ನೆ ಕಳೆದುಕೊಂಡಿದ್ದಾನೆ.

ಏನೋ ಮಾಡಲು ಹೋಗಿ ಇನ್ನೇನು ಆಗಿದೆ. ಅನ್ನೋ ಮಾತಿನಂತೆ ಅಮಿತ್ ವಿಚಾರದಲ್ಲೂ ನಡೆದಿದೆ. ಯಾಕಂದ್ರೆ ಹೆಂಡತಿಯನ್ನ ಮನೆಗೆ ಕರೀಬೇಕು ಅಂದುಕೊಂಡವನ್ನು ಸಾಯೋ ನಾಟಕ ಮಾಡೋದಕ್ಕೆ ಪ್ಲಾನ್ ಮಾಡಿದ್ದ. ಅದ್ರಂತೆ ಮನೆಯಲ್ಲಿದ್ದ ಫ್ಯಾನ್​ಗೆ ಹಗ್ಗ ಹಾಕಿ ಹೆಂಡತಿಗೆ ವೀಡಿಯೋ ಕಾಲ್ ಮಾಡಿದ್ದಾನೆ. ನೀನು ಬರದೇ ಇದ್ರೆ ನಾನು ಸೂಸೈಡ್ ಮಾಡಿಕೊಳ್ತೇನೆ ಅಂತ ಬೆದರಿಸೋಕೆ ಯತ್ನಿಸಿದ್ದಾನೆ. ಆದ್ರೆ ಈ ಟೈಮ್​​ನಲ್ಲಿ ಒಂದು ಎಡವಟ್ಟು ನಡೆದು ಹೋಗಿದೆ. ಅಮಿತ್ ಕೈಯಲ್ಲಿದ್ದ ಫೋನ್​ ಜಾರಿ ಕೆಳಗೆ ಬಿದ್ದು ಬಿಟ್ಟಿದೆ. ಆಗ ಅಮಿತ್ ಫೋನ್​ ಹಿಡಿಯೋಕೆ ಅಂತ ಮುಂದೆ ಬಾಗಿದಾಗ ಕುತ್ತಿಗೆಗೆ ಬಿಗಿದ್ದಿದ್ದ ಹಗ್ಗ ಬಿಗಿಯಾಗಿ ಅಮಿತ್ ಉಸಿರು ನಿಂತು ಹೋಗಿದೆ.

ಹೆಂಡತಿಗೆ ಸುಮ್ನೆ ಬೆದರಿಸೋಕೆ ಅಂತ ಅಮಿತ್ ಕುತ್ತಿಗೆಗೆ ಹಗ್ಗ ಹಾಕೊಂಡಿದ್ದ. ಆದ್ರೆ ಇವನ ದುರಾದೃಷ್ಟ ಕೈಯಲ್ಲಿದ್ದ ಮೊಬೈಲ್ ಜಾರಿ ಅಮಿತ್​ ಜೀವಕ್ಕೆ ಕುತ್ತು ತಂದಿದೆ. ನಾಟಕ ಮಾಡೋಕೆ ಅಂತ ಹೋದವನು ಬದುಕಿನ ನಾಟಕವನ್ನೆ ಮುಗಿಸಿಬಿಟ್ಟಿದ್ದಾನೆ. ಕುತ್ತಿಗೆಗೆ ಬಿಗಿದ ಹಗ್ಗವೇ ಅಮಿತ್ ಉಸಿರಿಗೆ ಉರುಳಾಗಿತ್ತು. ಬಾಗಲಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಂಡ ಹೆಂಡತಿ ಜಗಳ ಉಂಡು ಮಲಗೋ ವರೆಗೂ ಅಂತಾರೆ. ಆದ್ರೆ ಈ ದಂಪತಿ ಮಧ್ಯೆ ಶುರುವಾಗಿದ್ದ ಜಗಳ ಗಂಡನ ಕೊನೆಯಾಗಿದೆ. ಹೆಂಡತಿಗೆ ಹೆದರಿಸಲು ಹೋಗಿ ಜಿಮ್ ಟ್ರೈನರ್ ನಿಜವಾಗಲೂ ಜೀವ ಕಳೆದುಕೊಂಡಿದ್ದಾನೆ.

Advertisement
Previous Post

ಬಂಟ್ವಾಳ : ಗಾಂಜಾ ಸೇವನೆ, ಸಾಗಾಟ ; ಓರ್ವ ವಶಕ್ಕೆ

Next Post

ಜೂನ್ 7, 8ರಂದು ಕರ್ನಾಟಕಕ್ಕೆ ಮುಂಗಾರು ಎಂಟ್ರಿ

OtherNews

ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ ..!!
ಕ್ರೈಮ್

ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ ..!!

March 10, 2026
ಬುಲೆಟ್ ಬೈಕ್‌ನಿಂದ ಬಿದ್ದು 23 ವರ್ಷದ ಯುವತಿ ಸಾವು, ಗೆಳತಿ ಗಂಭೀರ..!!
ಕ್ರೈಮ್

ಬುಲೆಟ್ ಬೈಕ್‌ನಿಂದ ಬಿದ್ದು 23 ವರ್ಷದ ಯುವತಿ ಸಾವು, ಗೆಳತಿ ಗಂಭೀರ..!!

February 23, 2026
ಸ್ನೇಹಿತರ ಜೊತೆ ಊಟಕ್ಕೆ ಹೋಗ್ತಿದ್ದ ಯುವತಿಗೆ ಬುಲೆಟ್ ಡಿಕ್ಕಿ : ಯುವತಿ ಸಾವು..!!
ಕ್ರೈಮ್

ಸ್ನೇಹಿತರ ಜೊತೆ ಊಟಕ್ಕೆ ಹೋಗ್ತಿದ್ದ ಯುವತಿಗೆ ಬುಲೆಟ್ ಡಿಕ್ಕಿ : ಯುವತಿ ಸಾವು..!!

February 17, 2026
ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್ : ಪ್ರಕರಣ ದಾಖಲು..!!
ಕ್ರೈಮ್

ವಾಶ್​ರೂಂನಲ್ಲಿ ಕನ್ನಡದ ನಟಿಯ ಖಾಸಗಿ ವಿಡಿಯೋ ರೆಕಾರ್ಡ್ : ಪ್ರಕರಣ ದಾಖಲು..!!

February 17, 2026
ಮಸೀದಿಯೊಳಗೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ : ಪ್ರಕರಣ ದಾಖಲು..!!
ಕ್ರೈಮ್

ಮಸೀದಿಯೊಳಗೆ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ : ಪ್ರಕರಣ ದಾಖಲು..!!

February 16, 2026
ಡಿವೈಡರ್​​ ಹಾರಿ KSRTC ಬಸ್​​ಗೆ ಗುದ್ದಿದ ಕಾರು: ಐವರು ಸಾವು..!!
Featured

ಡಿವೈಡರ್​​ ಹಾರಿ KSRTC ಬಸ್​​ಗೆ ಗುದ್ದಿದ ಕಾರು: ಐವರು ಸಾವು..!!

February 15, 2026

Leave a Reply Cancel reply

Your email address will not be published. Required fields are marked *

Recent News

ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ ..!!

ಕೌಟುಂಬಿಕ ಕಲಹಕ್ಕೆ ದಂಪತಿ ಸೂಸೈಡ್ ..!!

March 10, 2026
ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

ಮಾಯಿದೆ ದೇವುಸ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಲೀನಾ ಸಲ್ದಾನ್ಹಾ ನಿಧನ..!!

March 9, 2026
ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ..!!

ಶ್ರಮ ಜೀವಿಗಳಿಗೆ ಸೀರೆ ನೀಡಿ ಗೌರವಿಸಿದ ಸುಳ್ಯದ ಹೆಸರಾಂತ ಚಿನ್ನದ ಮಳಿಗೆ..!!

March 9, 2026
ಹಾಸ್ಟೆಲ್​​ನ ವಾರ್ಡನ್​​ ಸೇರಿ ಹಲವರ ಮೇಲೆ ದಾಳಿ ನಡೆಸಿ ವಿದ್ಯಾರ್ಥಿ ಎಸ್ಕೇಪ್​​: ಗಾಯಗೊಂಡಿದ್ದ ಓರ್ವ ಬಾಲಕ ಸಾವು…!!

ಹಾಸ್ಟೆಲ್​​ನ ವಾರ್ಡನ್​​ ಸೇರಿ ಹಲವರ ಮೇಲೆ ದಾಳಿ ನಡೆಸಿ ವಿದ್ಯಾರ್ಥಿ ಎಸ್ಕೇಪ್​​: ಗಾಯಗೊಂಡಿದ್ದ ಓರ್ವ ಬಾಲಕ ಸಾವು…!!

March 8, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page