ದಾಸ್ ಪ್ರಮೋಷನ್ಸ್ ಹೋಮ್ ನರ್ಸಿಂಗ್ ಸೇವಾ ಸಂಸ್ಥೆ ಕಳೆದ 23 ವರುಷಗಳಿಂದ ಸೇವಾ ತರಬೇತಿಯೊಂದಿಗೆ ಉದ್ಯೋಗವನ್ನು ಕಲ್ಪಿಸಿ ನಿರುದ್ಯೋಗಿ ಯುವಕ-ಯುವತಿಯರಿಗೆ ದಾರಿ ದೀಪವಾಗಿದೆ.
ಕರ್ನಾಟಕದಾದ್ಯಂತ ಮಂಗಳೂರು ಕೇಂದ್ರೀಕೃತಗೊಂಡು ಬೆಂಗಳೂರು, ಮೈಸೂರು, ಹುಬ್ಬಳ್ಳಿ. ಬೆಳಗಾಂ. ಶಿವಮೊಗ್ಗ. ಹಾಸನ. ದಾವಣಗೆರೆ. ಬಳ್ಳಾರಿ. ಮುಂತಾದೆಡೆ ಶಾಖೆಗಳನ್ನು ಹೊಂದಿದ್ದು, ಕನಿಷ್ಠ ವಿದ್ಯಾರ್ಹತೆ 10, ಪಿ.ಯು.ಸಿ. ಡಿಗ್ರಿಯಾದ ವಿದ್ಯಾರ್ಥಿಗಳಿಗೆ ಆಸ್ಪತ್ರೆಗಳ ಮುಖಾಂತರ ಉಚಿತ ಸೇವಾ ತರಬೇತಿಯನ್ನು ಕೊಟ್ಟು ಉದ್ಯೋಗಕ್ಕೆ ಆಯ್ಕೆ ಮಾಡಲಾಗುತ್ತದೆ., ಹಾಗೂ ಈಗಾಗಲೇ ತರಬೇತಿ ಹೊಂದಿರುವ ನರ್ಸ್. ಹೋಮ್ ನರ್ಸ್. (GNM. ANM. PAYARAMEDICAL) ಕೋರ್ಸ್ ಆದ ಅಭ್ಯರ್ಥಿಗಳಿಗೆ ಸಂಸ್ಥೆಯಿಂದ ಉದ್ಯೋಗ ಅವಕಾಶ ಮಾಡಿಕೊಡಲಾಗಿದೆ.
ಸಂಸ್ಥೆಯಿಂದ ತರಬೇತಿ ಪಡೆದ ಅದೆಷ್ಟೋ ಅಭ್ಯರ್ಥಿಗಳು ದೇಶ-ವಿದೇಶಗಳಲ್ಲಿ ಉತ್ತಮ ಸೇವಾ ಅನುಭವ ಪಡೆದು ತನ್ನ ಬದುಕನ್ನು ನಿರೂಪಿಸಿದ ನಿದರ್ಶನವಿದೆ. ಸಂಸ್ಥೆಯು ವಯೋವೃದ್ಧರ, ರೋಗಿಗಳ ಆರೈಕೆಯಲ್ಲಿ ನಿಷ್ಠಾವಂತ ಅನುಭವಿ ನರ್ಸ್ ಹೋಮ್ ನರ್ಸ್ ಗಳನ್ನು ಮನೆ. ವೃದ್ಧಾಶ್ರಮ. ಆಸ್ಪತ್ರೆ.. ಮುಂತಾದ ಕಡೆ ಸಂಸ್ಥೆಯ ಪೂರ್ಣ ಜವಾಬ್ದಾರಿಯೊಂದಿಗೆ ಕಳುಹಿಸಿ., ದೇಶ-ವಿದೇಶಗಳಲ್ಲಿ ಅಸಂಖ್ಯಾತ ಗ್ರಾಹಕ ವರ್ಗವನ್ನು ಹೊಂದಿದೆ.
ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಮೂಲಕ ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜದ ವಿವಿಧ ಸೇವಾ ಚಟುವಟಿಕೆಯಲ್ಲಿ ತೊಡಗಿಸಿ ದಾಸ್ ಓಲ್ಡ್ ಹೆಲ್ತ್ ಕೇರ್ ಮೂಲಕ ವೃದ್ಧರ ಆರೈಕೆಯನ್ನು ಉಚಿತವಾಗಿ ಮಾಡುತ್ತಿದೆ ಹಾಗೂ ಸಮಾಜದ ಅಗ್ರಮಾನ್ಯರ ಸಂತುಷ್ಟ ಸೇವೆಯ ಮೂಲಕ ಸಾರ್ಥಕತೆಯ ಮೈಲಿಗಲ್ಲಿನೊಂದಿಗೆ ಬೆಳ್ಳಿ ಹಬ್ಬದ ಸಂಭ್ರಮಕ್ಕೆ ದಾಪುಗಾಲಿಟ್ಟಿದೆ.
‘ದಾಸ್ ಪ್ರಮೋಷನ್ಸ್’ ಹೋಮ್ ನರ್ಸಿಂಗ್ ಸೇವಾ ಸಂಸ್ಥೆ, ಕಂಕನಾಡಿ ಮಂಗಳೂರು., www.homenursingservices.org ಫೋ: 9343568915



























