ರಾಮನಗರ : ಜಿಪ್ಲೈನ್ ಆಡಲು ಹೋಗಿ ಮಹಿಳೆ ಪ್ರಾಣ ಕಳೆದುಕೊಂಡಿದ್ದಾರೆ. ಹಾರೋಹಳ್ಳಿ ಬೆಟ್ಟಹಳ್ಳಿ ಗ್ರಾಮದ ಜಂಗಲ್ ಟ್ರಯಲ್ಸ್ ರೆಸಾರ್ಟ್ನಲ್ಲಿ ಈ ದುರ್ಘಟನೆ ನಡೆದಿದ್ದು, ಅತ್ತಿಬೆಲೆ ಮೂಲದ ರಂಜಿನಿ (35) ಮೃತ ದುರ್ದೈವಿ.
ರಜೆ ಕಳೆಯಲು ಅತ್ತಿಬೆಲೆಯಿಂದ 18 ಮಂದಿ ರೆಸಾರ್ಟ್ಗೆ ಬಂದಿದ್ದರು. ರಂಜಿನಿ ರೆಸಾರ್ಟ್ನಲ್ಲಿ ಜಿಪ್ಲೈನ್ ಆಡಲು ಮುಂದಾಗಿದ್ದಾರೆ. ಈ ವೇಳೆ ಜಿಪ್ಲೈನ್ ಕಟ್ ಆಗಿದ್ದು, ಮಹಿಳೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.


























