ಮಂಗಳೂರು : ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಬಜೆಟ್ ಬಗ್ಗೆ ಓದಿಕೊಳ್ಳಲಿ ಎಂದು ಬಿಜೆಪಿ ನಾಯಕರನ್ನು ಸಿಎಂ ಸಿದ್ದರಾಮಯ್ಯ ಅಣಕಿಸಿದ್ರು., ಮಂಗಳೂರಿನಲ್ಲಿ ಮಾಧ್ಯಮದವರ ಜೊತೆ ಈ ಬಗ್ಗೆ ಅವರು ಮಾತನಾಡಿದರು.
ಸರ್ಕಾರ ಬಂದು ಒಂದು ವರ್ಷವಾಗಿದೆ. ನಾವು ಏನೇನು ಮಾಡಿದ್ದೇವೆ ಅಂತ ಜನರಿಗೆ ತಿಳಿಸಿದ್ದೇವೆ. ಬಿಜೆಪಿಯವರು ಸುಳ್ಳು ಹೇಳುತ್ತಾರೆ ಎಂದರು.
ನೀರಾವರಿಗೆ 16000 ಕೋಟಿ ರೂ ಇತ್ತು ಈ ವರ್ಷ 18 ಸಾವಿರ ಕೋಟಿ ಇಟ್ಟಿದ್ದೇವೆ. ಏನು ಮಾಡಿಲ್ಲ ಅಂತ ಅಂದ್ರೆ ಏನು ಹೇಳುವುದು., ಗ್ಯಾರಂಟಿಯನ್ನು ಸೇರಿಸಿ, ಒಂದು ಲಕ್ಷದ 20 ಸಾವಿರ ಕೋಟಿ ಬಜೆಟ್ ಕೊಟ್ಟಿದ್ದೇವೆ. ಬಿಜೆಪಿಯವರು ಬಜೆಟ್ ಓದುವುದಿಲ್ಲ ಎಕನಾಮಿಕ್ಸ್ ಗೊತ್ತಾಗುವುದಿಲ್ಲ., ಅಭಿವೃದ್ಧಿ ಶೂನ್ಯ ಅಭಿವೃದ್ಧಿ ಶೂನ್ಯ ಅಂತಾರೆ.
ಬಡವರಿಗೆ ಆರ್ಥಿಕವಾಗಿ ಸಫಲತೆ ಕೊಡುವುದು ಅಭಿವೃದ್ಧಿ ಅಲ್ವಾ. ಬಜೆಟ್ ಬಗ್ಗೆ ಬಿಜೆಪಿಯವರು ಓದಿಕೊಳ್ಳಲಿ ಎಂದು ಹೇಳಿದರು.


























