Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಟ್ಲ : MDMA ಮಾದಕ ವಸ್ತು ವಶ: ನಾಲ್ವರು ಆರೋಪಿಗಳ ಬಂಧನ…!!

    ವಿಟ್ಲ : MDMA ಮಾದಕ ವಸ್ತು ವಶ: ನಾಲ್ವರು ಆರೋಪಿಗಳ ಬಂಧನ…!!

    ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

    ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

    ಸುಳ್ಯ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಯಾಣಿಕರು ಅಪಾಯದಿಂದ ಪಾರು..!!

    ಸುಳ್ಯ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಯಾಣಿಕರು ಅಪಾಯದಿಂದ ಪಾರು..!!

    ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

    ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

    ಪುತ್ತೂರಿನಲ್ಲಿ ಮನೆ ಮಾರಾಟಕ್ಕಿದೆ..!!

    ಪುತ್ತೂರಿನಲ್ಲಿ ಮನೆ ಮಾರಾಟಕ್ಕಿದೆ..!!

    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

    ಗುರುತು ಸಿಗದ ವ್ಯಕ್ತಿ ಸಾವು: ಮಾಹಿತಿ ನೀಡುವಂತೆ ಕಡಬ ಪೊಲೀಸರ ಮನವಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜ್ಯ

ಓದುಬರಹ ಬಾರದ ಯುವಕನಿಗೆ ಎಸ್.ಎಸ್.ಎಲ್.ಸಿಯಲ್ಲಿ 623 ಅಂಕ ; ಕೋರ್ಟ್​​​ನಲ್ಲಿ ಕೆಲಸ : ಹೇ ಪ್ರಭು.. ಏನಿದು ಪ್ರಕರಣ!

May 21, 2024
in ರಾಜ್ಯ
0
ಓದುಬರಹ ಬಾರದ ಯುವಕನಿಗೆ ಎಸ್.ಎಸ್.ಎಲ್.ಸಿಯಲ್ಲಿ 623 ಅಂಕ ; ಕೋರ್ಟ್​​​ನಲ್ಲಿ ಕೆಲಸ : ಹೇ ಪ್ರಭು.. ಏನಿದು ಪ್ರಕರಣ!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

Advertisement
Advertisement
Advertisement

Advertisement
Advertisement

ಕಷ್ಟಪಟ್ಟು ಪ್ರತಿನಿತ್ಯ ಅನೇಕ ಗಂಟೆಗಳ ಕಾಲ ಓದಿದ್ರು ಕೂಡಾ ಅನೇಕರು ಎಸ್.ಎಸ್.ಎಲ್.ಸಿ., ಪಿಯುಸಿಯಲ್ಲಿ ಪಾಸಾಗಲು ಪರದಾಡುತ್ತಾರೆ. ಅದರಲ್ಲೂ ಹೆಚ್ಚಿನ ಮಾರ್ಕ್ಸ್ ಪಡೆಯಬೇಕಾದ್ರೆ ಆ ವಿದ್ಯಾರ್ಥಿಗಳು ಪಟ್ಟಿರುವ ಕಷ್ಟ ಅಷ್ಟಿಷ್ಟಿರಲ್ಲಾ. ಆದ್ರೆ ಇಲ್ಲೋರ್ವ ವ್ಯಕ್ತಿಗೆ ಎಸ್.ಎಸ್.ಎಲ್.ಸಿಯಲ್ಲಿ 625ಕ್ಕೆ 623 ಅಂಕಗಳು ಬಂದಿವೆ. ಆದ್ರೆ ಅಚ್ಚರಿ ಅಂದ್ರೆ ಆತನಿಗೆ ಕನ್ನಡ, ಇಂಗ್ಲಿಷ್, ಹಿಂದಿ ಯಾವುದೇ ಭಾಷೆಯನ್ನು ಓದಲು ಬರೋದಿಲ್ಲವಂತೆ. ಬರೆಯಲು ಕೂಡಾ ಬರೋದಿಲ್ಲವಂತೆ. ಆದ್ರು ಆತ ಹೇಗೆ ಅಷ್ಟೊಂದು ಅಂಕ ಪಡೆದ ಅನ್ನೋದು ಸ್ವತ ಜಡ್ಜ್ ಗೆ ಕೂಡಾ ಅಚ್ಚರಿ ತರಿಸಿದೆ. ಹೀಗಾಗಿ ಈ ಅಂಕಗಳ ಹಿಂದಿನ ನಿಗೂಢತೆಯನ್ನು ಪತ್ತೆ ಮಾಡಲು ಸ್ವತ: ನ್ಯಾಯಾಧೀಶರೇ ಖಾಸಗಿ ದೂರು ನೀಡಿದ್ದಾರೆ.

ಪ್ರಕರಣದ ವೃತ್ತಾಂತ :

ಕೊಪ್ಪಳ ನಗರದ ಜೆಎಂಎಫ್​.ಸಿ ನ್ಯಾಯಾಲಯದಲ್ಲಿ ಕಳೆದ ಕೆಲ ವರ್ಷಗಳಿಂದ ರಾಯಚೂರು ಜಿಲ್ಲೆಯ ಸಿಂದನೂರು ತಾಲೂಕು ಮೂಲದ ಪ್ರಭು ಲೋಕರೆ ಅನ್ನೋ 23 ವರ್ಷದ ಯುವಕ ಸ್ಕ್ಯಾವೆಂಜರ್ ಅಂದ್ರೆ ಸ್ವಚ್ಚತಾ ಕೆಲಸ ಮಾಡುತ್ತಿದ್ದ. ಏಳನೇ ತರಗತಿವರೆಗೆ ಓದಿದ್ದ ಪ್ರಭು, ನಂತರ ಮುಂದೆ ಶಾಲೆಯ ಮೆಟ್ಟಿಲು ಹತ್ತಿರಲಿಲ್ಲ. ಶಾಲೆ ಬಿಟ್ಟು ಕೋರ್ಟ್ ನಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ. ಆದ್ರೆ ಇದೇ ಪ್ರಭು ಯಾದಗಿರಿಯಲ್ಲಿರುವ ಜಿಲ್ಲಾ ಮತ್ತ ಸತ್ರ ನ್ಯಾಯಾಲಯದಲ್ಲಿ ಜವಾನ ಹುದ್ದೆಗೆ ಆಯ್ಕೆಯಾಗಿದ್ದಾನೆ. 2024ರ ಎಪ್ರಿಲ್ 22 ರಂದು ಜವಾನ ಹುದ್ದೆಯ ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಆ ಆಯ್ಕೆ ಪಟ್ಟಿಯಲ್ಲಿ ಪ್ರಭು ಲೋಕರೆ ಹೆಸರು ಕೂಡಾ ಇದೆ.

ಜವಾನ ಹುದ್ದೆಗೆ ಆಯ್ಕೆಯಾಗಬೇಕಾದ್ರೆ ಎಸ್ ಎಸ್ ಎಲ್ ಸಿ ಪಾಸಾಗಿರಬೇಕು. ಜೊತೆಗೆ ಹೆಚ್ಚಿನ ಅಂಕ ಪಡೆದವರಿಗೆ ಜವಾನ ಹುದ್ದೆ ಸಿಗುತ್ತದೆ. ಆದ್ರೆ ಪ್ರಭು ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಲಯದಲ್ಲಿ ಜವಾನ ಆಗಿ ಆಯ್ಕೆಯಾಗಿದ್ದು, ಕೊಪ್ಪಳ ಜೆಎಂಎಫ್​ ಸಿ ನ್ಯಾಯಾಧೀಶರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಯಾಕಂದ್ರೆ ಕಳೆದ ಕೆಲ ವರ್ಷಗಳಿಂದ ಕೊಪ್ಪಳ ನ್ಯಾಯಾಲಯದಲ್ಲಿ ಪ್ರಭುವನ್ನು ನೋಡಿದ್ದರು. ಆತ ಎಂದಿಗೂ ಶಾಲೆಗೆ ಹೋಗಿದನ್ನು ಯಾರು ನೋಡಿರಲಿಲ್ಲಾ. ಜೊತೆಗೆ ಆತನಿಗೆ ಕನ್ನಡ ಸೇರಿದಂತೆ ಇಂಗ್ಲಿಷ್, ಹಿಂದಿ ಭಾಷೆಯನ್ನು ಸ್ಪಷ್ಟವಾಗಿ ಓದಲು, ಬರೆಯಲು ಕೂಡಾ ಬರೋದಿಲ್ಲಾ ಅನ್ನೋದನ್ನು ಅನೇಕ ಬಲ್ಲ ಮಾಹಿತಿಗಳ ಮೂಲಕ ತಿಳಿದುಕೊಂಡಿದ್ದರು. ಆದ್ರೆ ಇಂತಹ ವ್ಯಕ್ತಿ ಜವಾನ ಆಗಿ ಆಯ್ಕೆಯಾಗಿದ್ದು ಸ್ವತ ಜಡ್ಜ್ ಅವರಿಗೆ ಅಚ್ಚರಿಗೆ ಕಾರಣವಾಗಿತ್ತು.

ಹೀಗಾಗಿ ಸ್ವತ ಕೊಪ್ಪಳ ಜೆಎಂಎಫ್​ ಸಿ ನ್ಯಾಯಾಧೀಶರು, ಯಾದಗಿರಿ ಕೋರ್ಟ್ ನಲ್ಲಿ ಜವಾನ ಆಗಿ ಆಯ್ಕೆಯಾಗಿದ್ದ ಪ್ರಭು ಲೋಕರೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಆತ ಹುದ್ದೆ ಪಡೆಯಲು ಲಗತ್ತಿಸಿದ್ದ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಪರಿಶೀಲಿಸಿದ್ದರು. ಪರಿಶೀಲನೆ ನಡೆಸಿದಾಗ ಪ್ರಭು 625ಕ್ಕೆ ಬರೋಬ್ಬರಿ 623 ಅಂಕ ಪಡೆದಿದ್ದ. ಇದನ್ನು ನೋಡಿ ಜಡ್ಜ್ ಶಾಕ್ ಆಗಿದ್ದರು.

ಕನ್ನಡವನ್ನು ಕೂಡಾ ಸ್ಪಷ್ಟವಾಗಿ ಓದಲು, ಬರೆಯಲು ಬಾರದ ಯುವಕ ಇಷ್ಟೊಂದು ಅಂಕ ಪಡೆದಿದ್ದು ಹೇಗೆ ಅನ್ನೋದು ಸ್ವತ ಜಡ್ಜ್ ಅವರಿಗೆ ಕೂಡಾ ಅಚ್ಚರಿಯಾಗಿತ್ತು. ಹೀಗಾಗಿ ಇದರಲ್ಲಿ ಏನೋ ಅಕ್ರಮ ನಡೆದಿದೆ. ಇದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗಿದೆ ಅನ್ನೋದನ್ನು ಅರಿತ ಜಡ್ಜ್ ಅವರು ಕೊಪ್ಪಳ ನಗರ ಠಾಣೆಗೆ ಖಾಸಗಿ ದೂರನ್ನು ನೀಡಿದ್ದಾರೆ. ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚಿನ ಅಂಕ ಪಡೆಯಲು ಈತನ ಜೊತೆ ಇನ್ನೂ ಕೆಲ ಮಂದಿ ಶಾಮೀಲಾಗಿರಬಹುದು. ಈ ಬಗ್ಗೆ ವಿವರವಾದ ತನಿಖೆ ನಡೆಸಬೇಕು. ಸರ್ಕಾರಿ ಉದ್ಯೋಗವನ್ನು ಅಕ್ರಮವಾಗಿ ಪಡೆಯಲು ಇಂತಹದೊಂದು ವಂಚನೆ ಎಸಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಅಂತ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಭು ಲೋಕರೆ ವಿರುದ್ದ 2024 ರ ಎಪ್ರಿಲ್ 26 ರಂದು ಕೊಪ್ಪಳ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರಿನ ಆಧಾರದ ಮೇಲೆ ಕೊಪ್ಪಳ ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಂಕಪಟ್ಟಿ ಅಸಲಿ ಇದೆಯಾ, ನಕಲಿ ಇದೆಯಾ ಅನ್ನೋದು ಸೇರಿದಂತೆ ಬೋರ್ಡ್ ನಿಂದ ಮಾಹಿತಿ ಪಡೆಯಲು ಮುಂದಾಗಿದ್ದಾರೆ.

ದೆಹಲಿ ಬೋರ್ಡ್ ನಿಂದ ಅಂಕಪಟ್ಟಿ ಪಡೆದಿರೋ ಪ್ರಭು ಲೋಕರೆ

ಈ ಬಗ್ಗೆ ಮಾಹಿತಿ ನೀಡಿರುವ ಪ್ರಭು, ತಾನು 2017-18 ರಲ್ಲಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿರುವ ಖಾಸಗಿ ಸಂಸ್ಥೆಯೊಂದರ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದೆ. ದೆಹಲಿ ಎಜುಕೇಷನ್ ಬೋರ್ಡ್ ನಡೆಸಿರುವ ಪರೀಕ್ಷೆ ಅದು. ಆ ಪರೀಕ್ಷೆಗೆ ಹಾಜರಾಗಿ ನಾನು ಪಾಸಾಗಿದ್ದೇನೆ. ನಾನು ಪಡೆದಿರೋದು ಕರ್ನಾಟಕ ಎಸ್ ಎಸ್ ಎಲ್ ಸಿ ಬೋರ್ಡ್ ಪರೀಕ್ಷೆಯ ಅಂಕ ಪಟ್ಟಿಯಲ್ಲ ಅಂತ ಹೇಳಿದ್ದಾನೆ. ಜೊತೆಗೆ ನಾನೊಬ್ಬನೆ ಈ ರೀತಿಯಾಗಿ ಆಯ್ಕೆಯಾಗಿಲ್ಲ. ರಾಜ್ಯದಲ್ಲಿರುವ ಇನ್ನೂ ಅನೇಕ ನ್ಯಾಯಾಲಯಗಳಲ್ಲಿ ಇನ್ನೂ ಅನೇಕ ಮಂದಿ ಜವಾನ ಹುದ್ದೆಗೆ ಆಯ್ಕೆಯಾಗಿದ್ದಾರೆ ಅಂತಿದ್ದಾನೆ ಪ್ರಭು.

ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ನಡೆಯುತ್ತಿದೆಯಾ ಕಳ್ಳದಂಧೆ?

ಪ್ರಭು ಲೋಕರೆ ಎಂಬ ಯುವಕ ಅಕ್ರಮ ಮತ್ತು ವಂಚನೆ ಮೂಲಕ ಸ್ವತಃ ನ್ಯಾಯಾಲಯದಲ್ಲಿಯೇ ಉದ್ಯೋಗ ಗಿಟ್ಟಿಸಿರುವುದು ಆಶ್ಚರ್ಯ ಮತ್ತು ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ. ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ನಡೆಯುತ್ತಿದೆಯಾ ಕಳ್ಳದಂಧೆ ಎಂಬ ಅನುಮಾನವನ್ನೂ ಮೂಡಿಸಿದೆ. ಪ್ರಭು ಲೋಕರೆ ಪ್ರಕರಣ ಇಂದೊಂದೆ ಇರಬಹುದು ಎಂದು ಬಗೆಯುವುದು ತಪ್ಪಾದೀತು. ಏಕೆಂದರೆ ಸ್ವತಃ ಪ್ರಭು ಲೋಕರೆ ಈ ಬಗ್ಗೆ ಅನುಮಾನದ ಬೀಜ ಬಿತ್ತಿದ್ದು, ತನ್ನಂತೆ ಇನ್ನೂ ಅನೇಕ ಮಂದಿ ರಾಜ್ಯದ ನಾನಾ ಕೋರ್ಟ್​​ಗಳಲ್ಲಿ ಇದೇ ರೀತಿ ನೇಮಕಗೊಂಡಿದ್ದಾರೆ ಎಂದು ತಿಳಿಸಿರುವುದು ಆಶ್ಚರ್ಯ ತಂದಿದೆ.

ಎಸ್ ಎಸ್ ಎಲ್ ಸಿ ಮೇಲೆ ಸಿಗೋ ನೌಕರಿ ಪಡೆಯಲು ಅಭ್ಯರ್ಥಿಗಳು ವಾಮಮಾರ್ಗ ತುಳಿದಿದ್ದಾರೆ. ರಾಜ್ಯದ ಎಸ್ ಎಸ್ ಎಲ್ ಸಿ ಬೋರ್ಡ್ ಪರೀಕ್ಷೆ ಬಿಟ್ಟು, ಬೇರೆ ರಾಜ್ಯದ ಬಾಹ್ಯ ಪರೀಕ್ಷೆ ನಡೆಸೋ ಸಂಸ್ಥೆಗಳ ಪರೀಕ್ಷೆಗೆ ಹಾಜರಾಗಿ ಅಂಕಪಟ್ಟಿ ಗಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಣ ಕೊಟ್ಟವರಿಗೆ ಒಂದೆಡೆ ಕೂರಿಸಿ ಪರೀಕ್ಷೆ ಬರೆಸಿ ಹೆಚ್ಚಿನ ಅಂಕ ನೀಡೋ ಸಂಸ್ಥೆಗಳು ರಾಜ್ಯದಲ್ಲಿ ಸಕ್ರಿಯವಾಗಿರುವ ಬಗ್ಗೆ ಕೇಳಿಬಂದಿದೆ. ಈ ಬಗ್ಗೆ ತನಿಖೆ ನಡೆಸಿದರೆ ದೊಡ್ಡ ಮಟ್ಟದ ಅಕ್ರಮಜಾಲ ಬಯಲಾಗುವ ಸಾಧ್ಯತೆಯಿದೆ.

Advertisement
Previous Post

‘ಬಜೆಟ್ ಬಗ್ಗೆ ಓದಿಕೊಳ್ಳಲಿ’ ; ಬಿಜೆಪಿ ನಾಯಕರನ್ನು ಅಣಕಿಸಿದ ಸಿಎಂ ಸಿದ್ದರಾಮಯ್ಯ

Next Post

ದ್ವಿತೀಯ ಪಿಯು ಪರೀಕ್ಷೆ-2 ಫಲಿತಾಂಶ ಪ್ರಕಟ

OtherNews

ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!
Featured

ಋತುಚಕ್ರ ರಜೆ ನೀತಿ – 2025′ ಜಾರಿ : ಮಹಿಳೆಯರಿಗೆ ತಿಂಗಳಲ್ಲೊಂದು ದಿನ ವೇತನ ಸಹಿತ ರಜೆ..!!

October 10, 2025
ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!
Featured

ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!

August 4, 2025
ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!
ರಾಜ್ಯ

ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!

May 9, 2025
ರಾಜ್ಯದಲ್ಲಿ ಡೀಸೆಲ್ ದರ ಏರಿಕೆ; ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯ..!!
ಪುತ್ತೂರು

ರಾಜ್ಯದಲ್ಲಿ ಡೀಸೆಲ್ ದರ ಏರಿಕೆ; ಇಂದು ಮಧ್ಯರಾತ್ರಿಯಿಂದಲೇ ನೂತನ ದರ ಅನ್ವಯ..!!

April 1, 2025
ಮನೆ ಬಾಗಿಲಿಗೆ ಬರಲಿದೆ ಕರ್ನಾಟಕದ 14 ದೇಗುಲಗಳ ಪ್ರಸಾದ; ಇ-ಪ್ರಸಾದ ಸೇವೆ ಆರಂಭ..!!!
Featured

ಮನೆ ಬಾಗಿಲಿಗೆ ಬರಲಿದೆ ಕರ್ನಾಟಕದ 14 ದೇಗುಲಗಳ ಪ್ರಸಾದ; ಇ-ಪ್ರಸಾದ ಸೇವೆ ಆರಂಭ..!!!

March 28, 2025
ನಂದಿನಿ ಹಾಲಿನ ದರ 4 ರೂ. ಏರಿಕೆ; ರಾಜ್ಯದ ಜನರಿಗೆ ಶಾಕಿಂಗ್ ನ್ಯೂಸ್‌..!!!
Featured

ನಂದಿನಿ ಹಾಲಿನ ದರ 4 ರೂ. ಏರಿಕೆ; ರಾಜ್ಯದ ಜನರಿಗೆ ಶಾಕಿಂಗ್ ನ್ಯೂಸ್‌..!!!

March 27, 2025

Leave a Reply Cancel reply

Your email address will not be published. Required fields are marked *

Recent News

ವಿಟ್ಲ : MDMA ಮಾದಕ ವಸ್ತು ವಶ: ನಾಲ್ವರು ಆರೋಪಿಗಳ ಬಂಧನ…!!

ವಿಟ್ಲ : MDMA ಮಾದಕ ವಸ್ತು ವಶ: ನಾಲ್ವರು ಆರೋಪಿಗಳ ಬಂಧನ…!!

March 11, 2026
ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

ಉಳ್ಳಾಲ : ನಾಪತ್ತೆಯಾದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ..!!

March 11, 2026
ಸುಳ್ಯ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಯಾಣಿಕರು ಅಪಾಯದಿಂದ ಪಾರು..!!

ಸುಳ್ಯ ಬಳಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ : ಪ್ರಯಾಣಿಕರು ಅಪಾಯದಿಂದ ಪಾರು..!!

March 11, 2026
ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

ಪುತ್ತೂರು : ಕಾರ್ಯಕ್ರಮಗಳ ಸಮಯ ಮಿತಿ: ಪೊಲೀಸರ ತಾರತಮ್ಯ ನೀತಿ ಆರೋಪ ; ಖಂಡನೆ..!!

March 11, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page