ವೇಣೂರು : ಮಹಿಳೆ ಹಾಗೂ ಮಗನಿಗೆ ವ್ಯಕ್ತಿಯೋರ್ವ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯ ಮಗನಿಗೂ, ಬಳೆಂಜ ನಿವಾಸಿ ಪ್ರಕಾಶ್ ಶೆಟ್ಟಿ ಎಂಬಾತನಿಗೂ ಈ ಹಿಂದೆಯೇ ಮನಸ್ತಾಪವಿದ್ದು, ಮೇ.20 ರಂದು ರಾತ್ರಿ, ಬೆಳ್ತಂಗಡಿ ತಾಲೂಕು, ಬಳೆಂಜ ಗ್ರಾಮದ ಮೂಡಾಯಿಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದು, ಮಹಿಳೆಯ ಮಗ ಹಾಗೂ ಇನ್ನೋರ್ವ ಜನರೇಟರ್ ಸ್ಟಾರ್ಟ್ ಮಾಡಲು ಹೋದಾಗ ಕತ್ತಲಿನಲ್ಲಿ ಮಹಿಳೆಯ ಮಗ ಆಕಸ್ಮಿಕವಾಗಿ ಪ್ರಕಾಶ್ ಶೆಟ್ಟಿಗೆ ತಾಗಿದ್ದು, ಆಗ ಪ್ರಕಾಶ್ ಮಗನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು, ಗಲಾಟೆಯ ಶಬ್ದ ಕೇಳಿ ಸ್ಥಳಕ್ಕೆ ಬಂದ ಮಹಿಳೆಗೂ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಸಾರ್ವಜನಿಕರ ಎದುರಿನಲ್ಲಿ ಅನುಚಿತವಾಗಿ ವರ್ತಿಸಿರುವುದಲ್ಲದೇ, ಮಗನನ್ನುದ್ದೇಶಿಸಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ : 504, 323, 354, 506 ಐ.ಪಿ.ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


























