ಸುಬ್ರಹ್ಮಣ್ಯ : ಕೃಷಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಲೆಟ್ಟಿ, ಮೈಂದೂರು ಕಾನ ನಿವಾಸಿ ಮಹಿಳೆ ನೀಡಿದ ದೂರಿನ ಮೇರೆಗೆ ತೀರ್ಥರಾಜ, ಶಿವಪ್ಪ ನಾಯ್ಕ, ಯತೀನ್, ಪಲ್ಲವಿ, ಶ್ರುತಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಿಳೆಗೆ ಸುಳ್ಯ ತಾಲೂಕು ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಎಂಬಲ್ಲಿ ಕೃಷಿ ಜಮೀನಿದ್ದು, ಮೇ.25 ರಂದು ಮಹಿಳೆ ಮತ್ತು ಅವರ ಪತಿ ಸದ್ರಿ ಜಮೀನಿನ ಕೃಷಿ ಕೆಲಸಕ್ಕೆ 3-4 ಜನ ಕೆಲಸದಾಳುಗಳನ್ನು ಜೀಪಿನಲ್ಲಿ ಕರೆದುಕೊಂಡು ಹೋಗಿದ್ದು, ತೋಟದಲ್ಲಿ ಕೆಲಸ ಪ್ರಾರಂಭಿಸುವಾಗ ತೀರ್ಥರಾಜ, ಶಿವಪ್ಪ ನಾಯ್ಕ, ಯತೀನ್, ಪಲ್ಲವಿ ಹಾಗೂ ಶ್ರುತಿ ಎಂಬವರುಗಳು ಕೈಯಲ್ಲಿ ಕತ್ತಿ, ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಬೆದರಿಕೆ ಹಾಕುತ್ತಾ, ಅವಾಚ್ಯ ಶಬ್ದಗಳಿಂದ ಬೈಯುತ್ತಾ ಕೆಲಸಕ್ಕೆ ಅಡ್ಡಿಯುಂಟು ಮಾಡಿರುತ್ತಾರೆ.
ಮಹಿಳೆ ಹಾಗೂ ಗಂಡನಿಗೆ ಹಲ್ಲೆ ನಡೆಸಿದ್ದು, ಈ ವೇಳೆ ಅಲ್ಲಿದ್ದ ಕೆಲಸದಾಳುಗಳು ಬಂದು ಮಹಿಳೆ ಮತ್ತು ಅವರ ಗಂಡನನ್ನು ಬಿಡಿಸಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ.
ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ ನಂಬ್ರ :36/2024 ಕಲಂ: 143,147,148, 323,504,506 r/w 149 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.